ಮೈಸೂರು,ಡಿ,12,2019(www.justkannada.in): ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ (AIISH) ಡಿಸೆಂಬರ್ 14ರಂದು ಪದವಿ ದಿನಾಚಾರಣೆ( ಗ್ರಾಜ್ಯುವೆಷನ್ ಡೇ) ಕಾರ್ಯಕ್ರಮವನ್ನ ಆಯೋಜಿಸಲಾಗಿದೆ.
ಡಿಸೆಂಬರ್ 14 ರಂದು ಐಶ್ ನ ಸೆಮಿನಾರ್ ಹಾಲ್, ನಾಲೆಡ್ಜ್ ಪಾರ್ಕ್, ನೈಮಿಶಾಮ್ ಕ್ಯಾಂಪಸ್ನಲ್ಲಿ ಬೆಳಿಗ್ಗೆ 11.00 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಾಕ್ ಮತ್ತು ಶ್ರವಣ ಕ್ಷೇತ್ರದಲ್ಲಿ ಪದವಿ ಪಡೆದು ಹೊರ ಹೋಗುವ ಪದವೀಧರ, ಸ್ನಾತಕೋತ್ತರ, ಡಾಕ್ಟರೇಟ್ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಳಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮಾನ್ಯ ಉಪಕುಲಪತಿ ಪ್ರೊ.ಎಸ್. ವಿದ್ಯಾಶಂಕರ್ ಅವರು ಪದವಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನ ಪ್ರದಾನ ಮಾಡಲಿದ್ದಾರೆ.
ನವದೆಹಲಿಯ MoHFW, ಆರೋಗ್ಯ ಸೇವೆಗಳ ನಿರ್ದೇಶನಾಲಯದ ಉಪ ಮಹಾನಿರ್ದೇಶಕರಾದ (ಕಿವುಡುತನ) ಡಾ.ಅನಿಲ್ ಕುಮಾರ್ ಅವರು ಚಿನ್ನದ ಪದಕಕ್ಕೆ ಭಾಜನರಾದ ವಿದ್ಯಾರ್ಥಿಗಳಿಗೆ ಪದಕ ಪ್ರದಾನ ಮಾಡಲಿದ್ದಾರೆ. ಹಾಗೆಯೇ ಮಾಜಿ ಡೀನ್-ಮಾಹೆ ಮತ್ತು ಪ್ರೊಫೆಸರ್ – ಡಿಪಾರ್ಟ್ಮೆಂಟ್ ಸ್ಪೀಚ್ ಅಂಡ್ ಹಿಯರಿಂಗ್, ಮಣಿಪಾಲ್ ಹೆಲ್ತ್ ಪ್ರೊಫೆಷನ್ಸ್ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊಫೆಸರ್ ಬಿ. ರಾಜಶೇಖರ್ ಪದವೀಧರರಿಗೆ ಪ್ರಮಾಣ ಬೋಧನೆ ಮಾಡಲಿದ್ದಾರೆ. ಎಐಐಎಸ್ಎಚ್ ನಿರ್ದೇಶಕಿ ಪ್ರೊ.ಎಂ.ಪುಷ್ಪವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
Key words: mysore- AIISH -Graduation Day – 14th December 2019