Mysore : ಲೇಸರ್‌ ಲೈಟ್‌ ಹಾವಳಿ, ಪುಂಡರ ಕೃತಕ್ಕೆ ಪೈಲೆಟ್‌ ಹೈರಾಣು.

 

ಮೈಸೂರು, ಜ ೦೩, ೨೦೨೩ : (www̤.justkannada̤.in news )  ಮೈಸೂರು ವಿಮಾನ ನಿಲ್ದಾಣದಲ್ಲಿ ಗಂಭೀರ ಸಮಸ್ಯೆ. ವಿಮಾನದ ಪೈಲೆಟ್‌ ಕಣ್ಣಿಗೆ ಲೇಸರ್ ಲೈಟ್ ಬಿಡುತ್ತಿರುವ ಕಿಡಿಗೇಡಿಗಳು.

ಮೈಸೂರಿನ ಮಂಡಕಹಳ್ಳಿ ವಿಮಾನ ನಿಲ್ದಾಣದಲ್ಲಿ ಕಳೆದ ಒಂದುವರೆ ತಿಂಗಳಿಂದ ಈ ಸಮಸ್ಯೆ ಎದುರಿಸುತ್ತಿರುವ ಪೈಲೆಟ್‌ ಗಳು.

ಈ ಬಗ್ಗೆ ಸಾಂದರ್ಭಿಕ ಪೋಟೋ ಸಮೇತ ಮಾಹಿತಿ ನೀಡಿದ ವಿಮಾನ ನಿಲ್ದಾಣ ಪ್ರಾಧಿಕಾರ.

ಈ ಘಟನೆ ಪುನರಾವರ್ತನೆಯಾಗುತ್ತಿದೆ. ವಿಮಾ‌ನ ಲ್ಯಾಂಡಿಗ್‌ ಹಾಗೂ  ಟೇಕಾಫ್ ಆಗುವಾಗ ಲೇಸರ್ ಲೈಟ್ ಹಾವಳಿ. ಎರಡು ಬದಿಯಿಂದಲೂ ಲೇಸರ್ ಲೈಟ್ ಬಿಡುತ್ತಿರುವ ಕಿಡಿಗೇಡಿಗಳು. ಹಾವಳಿಯಿಂದ ಹೈರಾಣಾಗಿರುವ ಪೈಲೆಟ್‌ ಗಳು.

ಘಟನೆ ಬಗ್ಗೆ ʼ ಜಸ್ಟ್‌ ಕನ್ನಡ ʼ ಜತೆ ಮಾತನಾಡಿದ ಮೈಸೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಅನೂಪ್‌ ಜೆ.ಆರ್.‌ ಹೇಳಿದಿಷ್ಟು..

ಅನೂಪ್‌ ಜೆ.ಆರ್‌, ನಿರ್ದೇಶಕರು, ಮೈಸೂರು ವಿಮಾನ ನಿಲ್ದಾಣ ಪ್ರಾಧಿಕಾರ.

ಕಳೆದ ಒಂದುವರೆ ತಿಂಗಳಿಂದ ವಿಮಾನಗಳು ಲ್ಯಾಂಡಿಂಗ್‌ ಹಾಗೂ ಟೇಕಾಫ್‌ ಆಗುವ ವೇಳೆ ಲೇಸರ್‌ ಲೈಟ್‌ ಗಳನ್ನುಬಿಟ್ಟು ಪೈಲೆಟ್‌ ಗಳ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಇದನ್ನು ಯಾರು ಮಾಡುತ್ತಿದ್ದಾರೆ ಎಂಬುದು ತಿಳಿದು ಬಂದಿಲ್ಲ. ರನ್‌ ವೇ ಎರಡು ಕಡೆಗಳಿಂದಲೂ ಇಂಥ ಸಮಸ್ಯೆ ಎದುರಾಗುತ್ತಿದೆ. ಮನೆ ಮಹಡಿ ಮೇಲಿಂದ ಮೋಜಿಗಾಗಿ ಯಾರಾದ್ರು ಈ ರೀತಿ ಉಪದ್ರವ ಕೊಡುತ್ತಿದ್ದಾರೋ ಅಥವಾ ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗುತ್ತಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ಈಗಾಗಲೇ ಸ್ಥಳೀಯ ಪೊಲೀಸರಿಗೆ ದೂರು ನೀಡಲಾಗಿದೆ. ಆದರೂ ಸಮಸ್ಯ ಇತ್ಯರ್ಥವಾಗಿಲ್ಲ.

ಕಡೆಗೆ ಅನಿವಾರ್ಯವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಾಧ್ಯಮಗಳ ಮೊರೆ ಹೋಗಬೇಕಾಯಿತು. ಕಡೆಪಕ್ಷ ಮಾಧ್ಯಮಗಳಲ್ಲಿನ ವರದಿ ನೋಡಿಯಾದರು ಮೋಜಿಗಾಗಿ ಕೃತ್ಯ ಎಸಗುತ್ತಿದ್ದರೆ ಅದನ್ನು ನಿಲ್ಲಿಸಲಿ ಅಥವಾ ಉದ್ದೇಶಪೂರ್ವಕಾಗಿಯೇ ಮಾಡುತ್ತಿದ್ದರೆ ಅಕ್ಕಪಕ್ಕದವರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಲಿ ಎಂಬುದು ಉದ್ದೇಶ ಎಂದು ಸ್ಪಷ್ಟಪಡಿಸಿದರು.

Key words : mysore – airport authority- laser light -problem -police- director

english summary :

Serious problem at Mysore airport. Miscreants leaving a laser light in the eyes of the pilot of the aircraft.

The pilots at Mandakahalli Airport in Mysuru have been facing this problem for the past one-and-a-half months.

The Airport Authority of India (AAI) has informed about the incident along with a casual photo.