ಮೈಸೂರು, ಮೇ31, 2020 (www.justkannada.in): ಮೈಸೂರಿನಲ್ಲಿ ಓರ್ವ ಕೊರೋನಾ ಸೋಂಕಿತನನ್ನು ಡಿಸ್ಚಾರ್ಜ್ ಮಾಡಲಾಗಿದೆ.
ಮಹಾರಾಷ್ಟ್ರದಿಂದ ಮೈಸೂರಿಗೆ ಬಂದಿದ್ದ ಸೋಂಕಿತ. ಈತ ಕೆ.ಆರ್. ನಗರದಲ್ಲಿ ಕ್ವಾರಂಟೈನ್ ಆಗಿದ್ದ ಕೊರೊನಾ ಸೋಂಕಿತನಾಗಿದ್ದ. ಸಂಪೂರ್ಣ ಗುಣಮುಖನಾಗಿ ನಿನ್ನೆ ಸಂಜೆ ಡಿಸ್ಚಾರ್ಜ್ ಆಗಿದ್ದಾರೆ.
P1225 ಸೋಂಕಿತ ಕೋವಿಡ್ ಆಸ್ಪತ್ರೆಯಿಂದ ಡಿಸ್ವಾರ್ಜ್ ಮಾಡಲಾಗಿದೆ. ಉಳಿದ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ. ಐರ್ಲೆಂಡ್ ದೇಶದಿಂದ ಮೈಸೂರಿಗೆ ಬಂದಿದ್ದ ವ್ಯಕ್ತಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಮೈಸೂರಿನಲ್ಲಿರುವುದು 4 ಕೊರೊನಾ ಆಕ್ಟೀವ್ ಕೇಸ್ ಗಳು ಇವೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಮಾಹಿತಿ ನೀಡಿದ್ದಾರೆ.