ಮೈಸೂರು,ಜೂ,26,2020(www.justkannada.in): ಇಂದು ಮೈಸೂರು ಎಪಿಎಂಸಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಮೈಸೂರು ತಾಲ್ಲೂಕು ತಹಶಿಲ್ದಾರ್ ರಕ್ಷಿತ್ ಅಧ್ಯಕ್ಷತೆಯಲ್ಲಿ ಎಪಿಎಂಸಿ ಕಛೇರಿಯಲ್ಲಿ ಚುನಾವಣೆ ನಡೆಯುತ್ತಿದ್ದು, ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನಿಂದ ಕೋಟೆಹುಂಡಿ ಮಹದೇವ್, ಕಾಂಗ್ರೆಸ್ ನಿಂದ ಬಸವರಾಜ್ ಸ್ಪರ್ಧಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನಿಂದ ನಾಗರಾಜಪ್ಪ, ಕಾಂಗ್ರೆಸ್ ನಿಂದ ಆನಂದ್ ಎಂಬುವವರು ನಾಮಪತ್ರ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಮಾಜಿ ಸಚಿವ ಜಿಟಿ ದೇವೇಗೌಡರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನ ಡಿಕ್ಲೇರ್ ಮಾಡಲಾಗಿದ್ದು, ಜಿಟಿ ದೇವೇಗೌಡರು ಚುನಾವಣೆಯನ್ನ ತೀವ್ರ ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದಾರೆ.
ಮಡಿಕೇರಿಯ ರೆಸಾರ್ಟ್ ವೊಂದರಲ್ಲಿ ಬೀಡುಬಿಟ್ಟಿದ್ದು ಇದೀಗ ರೆಸಾರ್ಟ್ ನಿಂದ ಮೈಸೂರಿನತ್ತ ಜೆಡಿಎಸ್ ಕಾಂಗ್ರೆಸ್ ಸದಸ್ಯರು ಆಗಮಿಸಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ನಾಮನಿರ್ದೇಶಿತ ಸದಸ್ಯರು ನಿರ್ಣಾಯಕ ಪಾತ್ರ ವಹಿಸಲಿದ್ದು ಬಿಜೆಪಿಯವರು ಯಾರಿಗೆ ಬೆಂಬಲಿಸುತ್ತಾರೋ ಅವರೇ ಅಧ್ಯಕ್ಷ ಪಟ್ಟಕ್ಕೇರುವುದು ನಿಶ್ಚಿತವಾಗಿದೆ. ಮಧ್ಯಾಹ್ನದ ವೇಳೆಗೆ ಎಪಿಎಂಸಿ ಚುನಾವಣಾ ಫಲಿತಾಂಶ ಹೊರಬೀಳಲಿದೆ.
Key words: Mysore –APMC- President-Vice-President –Election