ಮೈಸೂರು,ಅಕ್ಟೋಬರ್,26,2021(www.justkannada.in): ಮೈಸೂರು ಅನಂತಸ್ವಾಮಿ ಅವರ ಸಂಯೋಜನೆಯ ನಾಡಗೀತೆಯನ್ನು ಕರ್ನಾಟಕದ ಅಧಿಕೃತ ನಾಡಗೀತೆಯನ್ನಾಗಿ ಘೋಷಣೆ ಮಾಡುವಂತೆ ಸರ್ಕಾರಕ್ಕೆ ಮೈಸೂರು ಆರ್ಟಿಸ್ಟ್ಸ್ ಅಸೋಸಿಯೇಷನ್ ಮನವಿ ಮಾಡಿದೆ.
ರಾಷ್ಟ್ರಕವಿ ಕುವೆಂಪು ರಚಿತ ನಾಡಗೀತೆಯನ್ನು 60 ವರ್ಷಗಳ ಹಿಂದ ಮೈಸೂರು ಅನಂತಸ್ವಾಮಿಯವರು ಸಂಯೋಜನೆ ಮಾಡಿದ್ದು ಈಗಾಗಲೇ ಸರ್ಕಾರದ ಕಾರ್ಯಕ್ರಮಗಳಲ್ಲಿ ಈ ಸಂಯೋಜನೆಯ ನಾಡಗೀತೆಯಾದ “ಜಯ ಭಾರತ ಜನನಿಯ ತನುಜಾತೆ” ಹಾಡನ್ನು ಹಾಡುತ್ತಿದ್ದಾರೆ.
ಈ ಗೀತೆಯು ಸರ್ಕಾರ ನಿಗದಿತ ಸಮಯದಲ್ಲಿ ರೂಪಿಸಲಾಗಿದ್ದು ನಾಡಗೀತೆಯ ಸಾಹಿತ್ಯಕ್ಕೆ ಭಾವಪೂರ್ಣ ಹಾಗೂ ಅರ್ಥಗರ್ಭಿತವಾಗಿ ಸಂಯೋಜನೆ ಮಾಡಲಾಗಿದೆ , ಆದ್ದರಿಂದ ಮೈಸೂರು ಅನಂತಸ್ವಾಮಿ ಅವರ ಸಂಯೋಜನೆಯ ಗೀತೆಯನ್ನು ಕರ್ನಾಟಕ ರಾಜ್ಯದಿಂದ ನಾಡಗೀತೆಯನ್ನಾಗಿ ಸರ್ಕಾರವು ಪರಿಗಣಿಸಬೇಕು ಹಾಗೂ ಅಧಿಕೃತವಾಗಿ ಘೋಷಣೆ ಮಾಡಬೇಕು.
“ಜಯ ಭಾರತ ಜನನಿಯ ತನುಜಾತೆ” ಗೀತೆಯನ್ನು ಕರ್ನಾಟಕ ಸರ್ಕಾರವು ನಮ್ಮ ಕರ್ನಾಟಕ ರಾಜ್ಯದ ನಾಡಗೀತೆಯನ್ನಾಗಿ ಅಧಿಕೃತವಾಗಿ ಘೋಷಣೆ ಮಾಡಬೇಕು. ಈ ಮೂಲಕ ಸುಗಮ ಸಂಗೀತ ದೊರೆ ಎಂದೆ ಪ್ರಖ್ಯಾತವಾಗಿರುವ ನಮ್ಮ ಮೈಸೂರು ಅನಂತಸ್ವಾಮಿ ರವರಿಗೆ ಗೌರವ ಸಲ್ಲಿಸಬೇಕು ಎಂದು ಮೈಸೂರು ಅನಂತಸ್ವಾಮಿ ಅವರ ಹುಟ್ಟುಹಬ್ಬದ ದಿನದಂದು ಸರ್ಕಾರಕ್ಕೆ ಈ ಮನವಿ ಸಲ್ಲಿಸುತ್ತಿದ್ದೇವೆ ಎಂದು ಮೈಸೂರು ಆರ್ಟಿಸ್ಟ್ಸ್ ಅಸೋಸಿಯೇಷನ್ ಸದಸ್ಯರು ತಿಳಿಸಿದ್ದಾರೆ.
Key words: Mysore -appeals – government – Karnataka -official – Anthem-mysore Anandaswamy -composition.