ಮೈಸೂರು,ಆಗಸ್ಟ್,27,2021(www.justkannada.in): ಮೈಸೂರಿನಲ್ಲಿ ದರೋಡೆ ಮತ್ತು ಗುಂಡೇಟು ಪ್ರಕರಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳನ್ನ ಬಂಧಿಸಿದ್ದೇವೆ ಎಂದು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದರು.
ಮೈಸೂರಿನಲ್ಲಿ ಗೃಹಸಚಿವ ಅರಗ ಜ್ಞಾನೇಂದ್ರ ಹಾಗೂ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಜಂಟಿ ಸುದ್ದಿಗೋಷ್ಠಿ ನಡೆಸಿ, ಮೈಸೂರಿನ ದರೋಡೆ, ಕೊಲೆ ಪ್ರಕರಣ ಹಾಗೂ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿ&ಐಜಿಪಿ ಪ್ರವೀಣ್ ಸೂದ್ . ಆಗಸ್ಟ್ 23 ರಂದು ಮೈಸೂರಿನಲ್ಲಿ ದರೋಡೆ ಮತ್ತು ಗುಂಡೇಟು ಪ್ರಕರಣ ನಡೆದಿತ್ತು. ಮೈಸೂರು ಪೋಲಿಸ್ ಆಯುಕ್ತರು ಐದು ತಂಡ ರಚಿಸಿ ದೇಶದ ಬೇರೆ ಬೇರೆ ಭಾಗಕ್ಕೆ ಕಳುಹಿಸಿದ್ದರು. ನಾಲ್ಕು ದಿನಗಳ ನಂತರದಲ್ಲಿ ಒಳ್ಳೆಯ ಸುದ್ದಿ ಕೊಡುತ್ತಿದ್ದೇವೆ. ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದೇವೆ. ಫ್ಲ್ಯಾನ್ ಮಾಡಿದವರ ಪೈಕಿ ಇಬ್ಬರು ಬಂಧನವಾಗಿದೆ. ಒಬ್ಬರು ಮೈಸೂರು, ಇನ್ನೊಬ್ಬ ರಾಜಸ್ತಾನದವರು. ದರೋಡೆ, ಕೊಲೆ ಮಾಡಿದವರು ಪೈಕಿ ಇಬ್ಬರು ಪಶ್ಚಿಮ ಬಂಗಾಳದವರು. ಮುಂಬೈನಲ್ಲಿ ಒಬ್ಬ ಮತ್ತು ಜಮ್ಮು ಕಾಶ್ಮೀರದಲ್ಲಿ ಬಂಧಿಸಲಾಗಿದೆ. ಪ್ರಕರಣ ಸಂಬಂಧ ಇನ್ನಿಬ್ಬರ ಬಂಧನ ಆಗಬೇಕಿದೆ ಎಂದು ತಿಳಿಸಿದರು.
ದೇಶದ ನಾನಾ ಕಡೆ ನಮ್ಮ ಪೊಲೀಸರು ಯಶಸ್ವಿಯಾಗಿ ಅರೆಸ್ಟ್ ಮಾಡಿದ್ದಾರೆ. ಡಕಾಯಿತಿಗೆ ಬಳಸಿದ್ದ ಕೆಲವು ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. ಫ್ಲ್ಯಾನ್ ಮಾಡಿದ್ದವರು ಸಹ ಜುವೆಲ್ಲರಿ ಶಾಪ್ ಇಟ್ಟುಕೊಂಡಿದ್ದವರು. ಪ್ಲಾನ್ ಮಾಡಿ ಹೊರಗಡೆಯಿಂದ ಜನರನ್ನ ಕರೆಸಿ ಈ ಕೃತ್ಯವೆಸಗಿದ್ದಾರೆ. ದೇಶದ ನಾನಾ ಭಾಗದ ವ್ಯಕ್ತಿಗಳನ್ನ ಬಳಸಿ ಡಕಾಯತಿ ನಡೆಸಲಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಮಾಹಿತಿ ನೀಡಿದರು.
ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ: ಆರೋಪಿಗಳನ್ನ ಕೂಡಲೇ ಬಂಧಿಸುತ್ತೇವೆ
ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಮಾತನಾಡಿದ ಡಿಜಿಐಜಿಪಿ ಪ್ರವೀಣ್ ಸೂದ್, ಪ್ರಕರಣ ನಡೆಯಬಾರದಿತ್ತು. ನಡೆದು ಹೋಗಿದೆ. ಇದು ಅತ್ಯಂತ ಸೂಕ್ಷ್ಮ ಪ್ರಕರಣವಾಗಿದ್ದರಿಂದ ಹೇಳಲು ಆಗಲ್ಲ. ಘಟನೆಯನ್ನ ಗಂಭೀರವಾಗಿ ಪರಿಗಣಿಸಿದ್ದೇವೆ. ಗ್ಯಾಂಗ್ ರೇಪ್ ಆರೋಪಿಗಳನ್ನ ಕೂಡಲೇ ಬಂಧಿಸುತ್ತೇವೆ. ಆರೋಪಿಗಳನ್ನ ಹಿಡಿಯಲು ಹೆಚ್ಚಿನ ಸಮಯ ಬೇಕಾಗಿದೆ ಎಂದರು.
ಯಾರ ಮೇಲೆ ದೌರ್ಜನ್ಯ ನಡೆದರೂ ಅವರು ಸುಧಾರಿಸಿಕೊಳ್ಳಬೇಕು. ಸುಧಾರಿಸಿಕೊಂಡ ನಂತರ ಹೇಳಿಕೆ ಪಡೆಯಲಾಗುತ್ತದೆ. ಭದ್ರತೆ ದೃಷ್ಠಿಯಿಂದ ಎಲ್ಲಾ ವಿಚಾರ ಬಹಿರಂಗ ಗೊಳಿಸಲು ಆಗಲ್ಲ ಎಂದು ಪ್ರವೀಣ್ ಸೂದ್ ತಿಳಿಸಿದರು.
Key words: mysore Arrest 6 accused- robbery case-gang rape – DG & IGP- Praveen Sood