ಮೈಸೂರು,ಜೂನ್,16,2022(www.justkannada.in): ನಗರದ ವಿದ್ಯಾರಣ್ಯಪುರಂ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರು ಸರಗಳ್ಳರನ್ನ ಬಂಧಿಸಿ 13,50,000 ರೂ ಬೆಲೆ ಬಾಳುವ ಸುಮಾರು 300 ಗ್ರಾಂ ತೂಕದ 7 ಚಿನ್ನದ ಸರಗಳು ಕೃತ್ಯಕ್ಕೆ ಬಳಸಿದ್ದ ಮೂರು ದ್ವಿಚಕ್ರವಾಹನ 5 ಮೊಬೈಲ್ ಫೋನ್ ಗಳನ್ನ ವಶಕ್ಕೆ ಪಡೆದಿದ್ದಾರೆ.
ಮೇ 30 ರಂದು ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಗಳ್ಳತನ ಪ್ರಕರಣದ ಪತ್ತೆ ಸಂಬಂಧ ಕ್ರಮ ಕೈಗೊಂಡ ವಿದ್ಯಾರಣ್ಯಪುರಂ ಪೊಲೀಸರು ಜೂನ್ 5 ರಂದು ಶ್ರೀರಾಂಪುರ ರಿಂಗ್ ರಸ್ತೆಯಲ್ಲಿ ಒಂದು ದ್ವಿಚಕ್ರ ವಾಹನದಲ್ಲಿ ಅನುಮಾನಾಸ್ಪದವಾಗಿ ಬರುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದರು, ಈ ಇಬ್ಬರು ವ್ಯಕ್ತಿಗಳು ಈ ಹಿಂದೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೇ ತಿಳಿದು ಬಂದಿದ್ದು, ನಂತರ ಕೂಲಂಕುಷವಾಗಿ ವಿಚಾರಣೆ ಮಾಡಲಾಗಿ, ಈ ಇಬ್ಬರು ಇನ್ನಿಬ್ಬರೊಂದಿಗೆ ಒಟ್ಟಿಗೆ ಸೇರಿ ಮತ್ತು ಪ್ರತ್ಯೇಕವಾಗಿ ಮೈಸೂರು ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಸರಗಳ್ಳತನ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ.
ನಂತರ ಮೇರೆಗೆ ಇನ್ನಿಬ್ಬರು ಆರೋಪಿಗಳನ್ನು ಜೂನ್ 12 ರಂಧು ರಂದು ಬಂಧಿಸಿ, ಆರೋಪಿಗಳಿಂದ ಒಟ್ಟು 07 ಸರಗಳ್ಳತನ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಒಟ್ಟು ರೂ. 13,50,000/- ಮೌಲ್ಯದ 300 ಗ್ರಾಂ ತೂಕದ 07 ಚಿನ್ನದ ಸರಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 03 ದ್ವಿಚಕ್ರ ವಾಹನಗಳು ಮತ್ತು 05 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸರಗಳ್ಳತನ ಪ್ರಕರಣಗಳಲ್ಲಿ ದಸ್ತಗಿರಿಯಾದ 04 ಆರೋಪಿಗಳಲ್ಲಿ ಒಬ್ಬ ಪ್ರಮುಖ ಆರೋಪಿಯು ಈ ಹಿಂದೆ ವಿದ್ಯಾರಣ್ಯಪುರಂ, ಹೆಬ್ಬಾಳ್. ನರಸಿಂಹರಾಜ, ಮಂಡಿ ಪೊಲೀಸ್ ಠಾಣೆಗಳಲ್ಲಿ ವಂಚನೆ, ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.
ಈ ಪತ್ತೆಯ ಕಾರ್ಯವು ಮೈಸೂರು ನಗರದ ಡಿ.ಸಿ.ಪಿ ಗೀತ ಎಂ.ಎಸ್ ಅವರ ಮಾರ್ಗದರ್ಶನದಲ್ಲಿ ಕೃಷ್ಣರಾಜ ವಿಭಾಗದ ಎ.ಸಿ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಮೇಲ್ವಿಚಾರಣೆಯಲ್ಲಿ ನಡೆದಿದ್ದು, ವಿದ್ಯಾರಣ್ಯಪುರಂ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ರಾಜು ಜಿ.ಸಿ., ಪಿಎಸ್‌ಐ ಎನ್.ವಿ.ರಂಗಸ್ವಾಮಿ, ಸಿದ್ಧಬಾಯಿ ಮಮದಪುರ್, ಎಎಸ್ ಐ ಮರಿಸ್ವಾಮಿ ಸಿಬ್ಬಂದಿಗಳಾದ ರಮೇಶ್, ಮಹೇಶ್ವರ, ನಟರಾಜು, ಶ್ರೀಧರಮೂರ್ತಿ ಕೆ ಪಾಲ್ಗೊಂಡಿದ್ದರು.
Key words: mysore-Arrest – four –burglars-gold chain- two wheelers-mobile phones -seized.