ಮೈಸೂರು,ಮಾ,13,2020(www.justkannada.in): ಮೈಸೂರಿನ ಕಸಾಯಿಖಾನೆಗೆ ಅಕ್ರಮವಾಗಿ ಹಸು ಕರುಗಳನ್ನ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು-ಮೈಸೂರು ರಸ್ತೆಯ ಕೆ.ಆರ್.ಮಿಲ್ ಕಾಲೋನಿ ಬಳಿ ಅಕ್ರಮವಾಗಿ ಕೆ.ಆರ್.ನಗರ ತಾಲೂಕಿನ ದೊಡ್ಡ ಸಂತೆಯಿಂದ ಮೈಸೂರಿನ ಕಸಾಯಿಖಾನೆಗೆ ಅಕ್ರಮವಾಗಿ ಕೆ.ಎ:51-9970 ಸಂಖ್ಯೆಯ ಬೊಲೆರೋ ಪಿಕ್ ಅಪ್ ವಾಹನದಲ್ಲಿ ಹಸುಕರುಗಳನ್ನು ಸಾಗಾಣಿಕೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ, 37 ಹಸುಕರುಗಳನ್ನು ರಕ್ಷಿಸಿದ್ದಾರೆ.
ಬಂಧಿತರನ್ನು ಅಫ್ಘಾನ್ ಖಾನ್ ಬಿನ್ ಅಹ್ಮದ್ ಖಾನ್ ( 23), 5ನೇ ಕ್ರಾಸ್, ಮಹ್ಮದ್ ಸೇಲ್ ಬ್ಲಾಕ್, ಲಷ್ಕರ್ ಮೊಹಲ್ಲಾ, ಮೈಸೂರು ನಗರ, ರುಮಾನ್ ಪಾಷ ಬಿನ್ ಅಕ್ರಂ ಪಾಷ (22), 5ನೇ ಕ್ರಾಸ್, ಸಾಯಿ ಮಸೀದಿ, ಸುನ್ನಿಚೌಕ, ಲಷ್ಕರ್ ಮೊಹಲ್ಲಾ, ಮೈಸೂರು, ಎಂಬವರನ್ನು ದಸ್ತಗಿರಿ ಮಾಡಿ ಈ ವಾಹನದಲ್ಲಿ ಒಂದರ ಮೇಲೆ ಒಂದರಂತೆ ಅತ್ಯಂತ ಕ್ರೂರವಾಗಿ ತುಂಬಿದ 37 ಹಸುಕರುಗಳನ್ನು ಸಂರಕ್ಷಿಸಿ ಅವುಗಳನ್ನು ಮೈಸೂರಿನ ಚಾಮುಂಡಿ ಬೆಟ್ಟದ ಪಾದದ ಬಳಿ ಇರುವ ಪಿಂಜರಾ ಪೋಲ್ ಸೊಸೈಟಿಗೆ ಮುಂದಿನ ಆರೈಕೆಗಾಗಿ ಹಸ್ತಾಂತರಿಸಿದ್ದಾರೆ.
ಪೊಲೀಸರು ಬೊಲೆರೋ ವಾಹನ ಮತ್ತು ಆರೋಪಿಗಳ ಬಳಿ ಇದ್ದ 4000 ರೂ.ಗಳನ್ನು ಹಾಗೂ 3 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ದಾಳಿ ಕಾರ್ಯವನ್ನು ಡಿ.ಸಿ.ಪಿ ಡಾ. ಎ.ಎನ್.ಪ್ರಕಾಶ್ಗೌಡ ಅವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ ಎ.ಸಿ.ಪಿ. ವಿ.ಮರಿಯಪ್ಪ ಅವರ ನೇತೃತ್ವದಲ್ಲಿ ಸಿ.ಸಿ.ಬಿ.ಯ ಇನ್ಸ್ಪೆಕ್ಟರ್ ಎ.ಮಲ್ಲೇಶ, ಆರ್.ರಾಜು, ಸಿಬ್ಬಂದಿಗಳಾದ ಜೋಸೆಫ್ ನೊರೋನ್ಹ, ದೀಪಕ್, ಶ್ರೀನಿವಾಸ್.ಕೆ.ಜಿ, ಅರುಣ್ ಕುಮಾರ್ ಹಾಗೂ ವಿ.ರಘು ಮಾಡಿದ್ದಾರೆ.
Key words: mysore-Arrest –illegally- transporting –cow- calves -slaughterhouse.