ಮೈಸೂರು,ಫೆಬ್ರವರಿ,4,2025 (www.justkannada.in): ದೇಶ ಕಂಡ ಶ್ರೇಷ್ಠ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ಕಾರ್ಯಕ್ರಮ ನಡೆಯುತ್ತಿದ್ದು ಈ ಅಂಗವಾಗಿ ಫೆಬ್ರವರಿ 15ರಿಂದ ಮಾರ್ಚ್ 15ರವರೆಗೆ ಅಟಲ್ ಜೀ ಬಗ್ಗೆ ಸಮಾವೇಶ ಆಯೋಜನೆ ಮಾಡಲಾಗುವುದು ಎಂದು ಅಟಲ್ ಜೀ ಜನ್ಮ ಶತಾಬ್ದಿ ಸಮಿತಿಯ ರಾಜ್ಯ ಸಹ ಸಂಚಾಲಕ ಫಣೀಶ್ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫಣೀಶ್, 2024ರ ಡಿಸೆಂಬರ್ 25 ರಿಂದ 2025 ಡಿಸೆಂಬರ್ 25 ರವರೆಗೆ ಅಟಲ್ ಜನ್ಮ ಶತಾಬ್ದಿ ಕಾರ್ಯಕ್ರಮ ನಡೆಯುತ್ತಿದೆ. ಅಟಲ್ ಜೀ ಅವರು ಅಜಾತ ಶತ್ರು. ವಿರೋಧ ಪಕ್ಷ ಕೂಡ ಅವರ ಬಗ್ಗೆ ಅಭಿಮಾನ ಹೊಂದಿದ್ದರು. ಅವರು ರಾಜಕಾರಣಿಗಳಿಗೆ ಆದರ್ಶರಾಗಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂದು ನುಡಿದರು.
ಅಟಲ್ ಜೀ ಅವರು ಜನಿಸಿ ನೂರು ವರ್ಷವಾದ ಹಿನ್ನೆಲೆಯಲ್ಲಿ ವರ್ಷ ಪೂರ್ತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮದ ಅಂಗವಾಗಿ 12 ಜನರ ತಂಡ ಸಮಿತಿ ಇರಲಿದ್ದು, ಅಟಲ್ ಜೀ ಅವರ ಮೂರು ಮುಖಗಳಾದ ಸಂಘಟನಾತ್ಮಕ, ಹೋರಾಟ ಮತ್ತು ವ್ಯಕ್ತಿತ್ವದ ಆಧಾರದ ಮೇಲೆ ಕಾರ್ಯಕ್ರಮ ನಡೆಯಲಿದೆ. ಮೈಸೂರು ಜಿಲ್ಲೆಯಲ್ಲಿ ಅಟಲ್ ಜೀ ಎಲ್ಲಿ ಉಳಿದುಕೊಂಡಿದ್ದರು. ಯಾರ ಸಂಪರ್ಕದಲ್ಲಿ ಇದ್ದರು ಎಂಬ ಬಗ್ಗೆ ಅಧ್ಯಯನ ಮಾಡಲಾಗುತ್ತದೆ. ಫೆಬ್ರವರಿ 15 ರಿಂದ ಮಾರ್ಚ್ 15 ರವರೆಗೆ ಅಟಲ್ ಜೀ ಬಗ್ಗೆ ಸಮಾವೇಶ ಆಯೋಜನೆ ಮಾಡಿ ಅವರ ಬಗ್ಗೆ ವಸ್ತುಗಳ ರೂಪದಲ್ಲಿ, ಲೇಖನ ರೂಪದಲ್ಲಿ ಅಭಿಪ್ರಾಯ ಸಂಗ್ರಹ ಮಾಡಲಾಗುವುದು. ಅಟಲ್ ಜೀ ಬಗ್ಗೆ ತಮ್ಮ ಅನುಭವ ಹೇಳುವುದನ್ನು ಕೂಡ ಸಂಗ್ರಹ ಮಾಡುತ್ತೇವೆಂದು ಎಂದು ಫಣೀಶ್ ತಿಳಿಸಿದರು.
Key words: mysore, Atal Birth Centenary, Program, Phanish