ಮೈಸೂರು,ಫೆ,19,2020(www.justkannada.in): ಇತ್ತೀಚಿನ ದಿನಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿ ಅಪಘಾತಗಳು ಜಾಸ್ತಿಯಾಗುತ್ತಿವೆ. ಈ ಹಿನ್ನೆಲೆ ರಸ್ತೆ ಸುರಕ್ಷತೆ , ಜೀವದ ರಕ್ಷೆ ಜಾಗೃತಿ ಮೂಡಿಸುವ ಸಲುವಾಗಿ ಇಂದು ಮೈಸೂರಿನಲ್ಲಿ ಬೀದಿನಾಟಕ ಆಯೋಜಿಸಲಾಗಿತ್ತು.
ಕೆಎಸ್ ಆರ್ ಟಿ ಸಿ ವತಿಯಿಂದ ರಸ್ತೆ ಸುರಕ್ಷತೆ , ಜೀವದ ರಕ್ಷೆ ಅಪಘಾತದಿಂದಾಗುವ ಭೀಕರ ಪರಿಣಾಮಗಳನ್ನು ಪ್ರತಿಬಿಂಬಿಸುವ ‘ಬದುಕಿ ಬದುಕಿಸು’ ಬೀದಿ ನಾಟಕ ಆಯೋಜಿಸಲಾಗಿತ್ತು. ಸಾತಗಳ್ಳಿ ಬಸ್ ಡಿಪೋ ನಲ್ಲಿ ಸಾಂಸ್ಕೃತಿಕ ಕಲಾಕುಟೀರ KSRTC ತಂಡದವರು ಈ ಬೀದಿ ನಾಟಕವನ್ನ ಪ್ರಸ್ತುತಪಡಿಸಿದರು.
ಕೆಎಸ್ಆರ್ ಟಿ ಸಿ ಅಧಿಕಾರಿಗಳು ಈ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಕೆ ಎಸ್ ಆರ್ ಟಿ ಸಿ ಎಲ್ಲಾ ಸಿಬ್ಬಂದಿಗಳು ಸೇರಿ ಈ ನಾಟಕವನ್ನು ಪ್ರಸ್ತುತ ಪಡಿಸಿದರು. ಇದೆ ರೀತಿ ಎಲ್ಲಾ ವಿಭಾಗದಲ್ಲೂ ಬೀದಿ ನಾಟಕಗಳ ಮೂಲಕ ಸಾರ್ವಜನಿಕರಿಗೆ ರಸ್ತೆ ಸುರಕ್ಷೆ ಮತ್ತು ಪರಿಣಾಮಗಳ ಕುರಿತು ಮಾಹಿತಿ ನೀಡುತ್ತಿದ್ದಾರೆ.
Key words: mysore-Awareness – road safety -life saving –street drama-ksrtc