ಮೈಸೂರು,ಜನವರಿ,7,2025 (www.justkannada.in): ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಇಂದು ಮೈಸೂರಿನಲ್ಲಿ ಕರೆ ನೀಡಲಾಗಿದ್ದ ಬಂದ್ ಭಾಗಶಃ ಯಶಸ್ವಿ.ಯಾಗಿದೆ.
ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಮೈಸೂರು ಬಂದ್ ಗೆ ಕರೆ ಹಿನ್ನೆಲೆ, ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ನಿಂದ ಮೈಸೂರು ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಜಾಥಾ ನಡೆಸಲಾಯಿತು. ಕಾಂಗ್ರೆಸ್ ಕಚೇರಿಯಿಂದ, ಆಯುರ್ವೇದ ವೃತ್ತ, ಅಶೋಕ ರಸ್ತೆ ಮೂಲಕ ಟೌನ್ ಹಾಲ್ ವರೆಗೆ ಜಾಥಾ ನಡೆಸಿ ಅಮಿತ್ ಶಾ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು ಜಾಥಾದಲ್ಲಿ ವಿವಿಧ ಧರ್ಮದ ಧರ್ಮಗುರುಗಳು ಭಾಗಿಯಾಗಿದ್ದರು.
ಮೈಸೂರು ಬಂದ್ ಹಿನ್ನೆಲೆ ಪ್ರತಿಭಟನಕಾರರು ಮೈಸೂರು ಪ್ರಮುಖ ರಸ್ತೆಯಲ್ಲಿರುವ ಅಂಗಡಿಗಳನ್ನ ಬಂದ್ ಮಾಡಿಸಿದ್ದು, ಅರಸು ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಇನ್ನು ನಗರದಲ್ಲಿರುವ ಕೇಂದ್ರ ಸರ್ಕಾರದ ಕಚೇರಿಗಳೂ ಬಂದ್ ಮಾಡಲಾಗಿತ್ತು.
ನಗರದ ಅಶೋಕ ರೋಡ್ ಬಳಿ ಇರುವ ಪೋಸ್ಟ್ ಆಫೀಸ್, ಎಸ್ ಬಿ ಐ ಬ್ಯಾಂಕ್ ಸೇರಿದಂತೆ ಅಶೋಕ್ ರೋಡ್ ನ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಗಿತ್ತು. ಬಂದ್ ಗೆ ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಬೆಂಬಲ ನೀಡಿದ್ದು, ನಗರದ ಹಲವೆಡೆ ಪ್ರತಿಭಟನಾ ಧರಣಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದರು.
ಮೈಸೂರು ಬಂದ್ ಗೆ ಪೌರಕಾರ್ಮಿಕರ ಬೆಂಬಲ.
ಮೈಸೂರು ಬಂದ್ ಗೆ ಪೌರಕಾರ್ಮಿಕರ ಬೆಂಬಲ ನೀಡಿದ್ದು, ಕೆಲಸ ಸ್ಥಗಿತಗೊಳಿಸಿ ಮೈಸೂರು ಮಹಾನಗರ ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸಿದರು. ಕೇಂದ್ರ ಸಚಿವ ಅಮಿತ್ ಶಾ ಅಣುಕು ಶವಯಾತ್ರೆ ಮೆರವಣಿಗೆ ನಡೆಸಿದ್ದು, ಚಟ್ಟ ಕಟ್ಟಿ ಅಮಿತ್ ಶಾ ಪ್ರತಿಕೃತಿ ಇಟ್ಟು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಮಿತ್ ಶಾ ಹೇಳಿಕೆ ಖಂಡಿಸಿ ವಕೀಲರಿಂದಲೂ ಪ್ರತಿಭಟನೆ.
ಅಮಿತ್ ಶಾ ಹೇಳಿಕೆ ಖಂಡಿಸಿ ವಕೀಲರಿಂದಲೂ ಪ್ರತಿಭಟನೆ ನಡೆಯಿತು. ಹಳೆ ಕೋರ್ಟ್ ಮುಂಭಾಗದ ಗಾಂಧಿ ಪ್ರತಿಮೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ಮೂಲಕ ಪ್ರತಿಭಟನೆ ನಡೆಸಲಾಯಿತು.
ಕೆಲ ಕಾಲ ಮೈಸೂರು ಬೆಂಗಳೂರು ರಸ್ತೆ ಬಂದ್.
ನಗರದ ರಿಂಗ್ ರಸ್ತೆಗಳ ಪ್ರಮುಖ ಜಂಕ್ಷನ್ ಬಳಿಯೂ ರಸ್ತೆ ತಡೆ ಚಳವಳಿ ನಡೆಸಲಾಯಿತು. ಹಲವಾರು ದಲಿತಪರ, ಪ್ರಗತಿಪರ ಸಂಘಟನೆಗಳು ನಗರದ ಮಣಿಪಾಲ್ ಆಸ್ಪತ್ರೆ ಆಸ್ಪತ್ರೆ ಮೈಸೂರು ಬೆಂಗಳೂರು ಮುಖ್ಯ ಜಂಕ್ಷನ್ ಬಳಿಯೂ ಪ್ರತಿಭಟನಾ ಧರಣಿ ನಡೆಸಿದರು.
ಹಲವಾರು ದಲಿತಪರ, ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಲ ಕಾಲ ಮೈಸೂರು ಬೆಂಗಳೂರು ರಸ್ತೆ ಬಂದ್ ಆಗಿತ್ತು. ಪ್ರತಿಭಟನಾ ಧರಣಿಯಲ್ಲಿ ಉರಿಲಿಂಗಿ ಪೆದ್ದಿಮಠದ ಸ್ವಾಮೀಜೀ ಭಾಗಿಯಾಗಿದ್ದರು.
ಅಮಿತ್ ಶಾ ಹೇಳಿಕೆ ಖಂಡಿಸಿ ಸಂಸದ ಯದುವೀರ್ ಕಚೇರಿ ಮುಂಭಾಗ ಪೌರಕಾರ್ಮಿಕರ ಸಂಘಟನೆ ಮುಖಂಡರು ಅಮಿತ್ ಶಾ ಅಣುಕು ಶವಯಾತ್ರೆ ಮೆರವಣಿಗೆ ನಡೆಸಿದರು. ಕಾಡಾ ಕಚೇರಿ ಸುತ್ತ ಒಂದು ಸುತ್ತು ಮೆರವಣಿಗೆ ಹಾಕಿದರು.
ಇನ್ನು ಮೈಸೂರು ನಂಜನಗೂಡು ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ದಲಿತ ಸಂಘಟನೆ, ರೈತ ಸಂಘಟನೆಗಳಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ರಸ್ತೆ ತಡೆಯಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು.
Key words: Condemnation, Amit Shah, statement, Mysore bandh