ಮೈಸೂರು,ಫೆಬ್ರವರಿ,3,2022(www.justkannada.in): ರಾಯಚೂರಿನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಗೆ ಅಪಮಾನ ಮಾಡಿದ ನ್ಯಾಯಾಧೀಶರನ್ನ ವಜಾ ಮಾಡುವಂತೆ ಆಗ್ರಹಿಸಿ ಫೆಬ್ರವರಿ 7 ರಂದು ಮೈಸೂರು ಬಂದ್ ಗೆ ಸಂವಿಧಾನ ರಕ್ಷಣಾ ಸಮಿತಿ ಕರೆ ನೀಡಿದೆ.
ಈ ಕುರಿತು ಜಲದರ್ಶಿನಿ ಅತಿಥಿ ಗೃಹದಲ್ಲಿ ಸಂವಿಧಾನ ರಕ್ಷಣಾ ಸಮಿತಿ ಸದಸ್ಯರು ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದಾರೆ. ಘಟನೆ ನಡೆದು ವಾರ ಕಳೆದರೂ ನ್ಯಾಯಾಧೀಶರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ಕೂಡ ಘಟನೆ ಬಗ್ಗೆ ನಿರ್ಲಕ್ಷ್ಯವಹಿಸಿ ಅಂಬೇಡ್ಕರ್ ಗೆ ಅಪಮಾನ ಮಾಡುತ್ತಿದೆ.
ಮೈಸೂರಿನಲ್ಲಿ ವಿವಿಧ ವಿವಿಧ ಸಂಘಟನೆಗಳ ಜೊತೆಗೂಡಿ ಉಗ್ರ ಹೋರಾಟಕ್ಕೆ ಸಂವಿಧಾನ ರಕ್ಷಣಾ ಸಮಿತಿ ಸಭೆಯಲ್ಲಿ ನಿರ್ಧಾರ ಮಾಡಿದ್ದು ಹೀಗಾಗಿ ಫೆಬ್ರವರಿ 7 ರಂದು ನ್ಯಾಯಾಧೀಶರ ವಜಾಗೊಳಿಸುವಂತೆ ಆಗ್ರಹಿಸಿ ಮೈಸೂರು ಬಂದ್ ಗೆ ಕರೆ ನೀಡಲಾಗಿದೆ.
Key words: Mysore- Bandh- 7th– February.
ENGLISH SUMMARY…
Call for Mysuru bundh on February 7
Mysuru, February 3, 2022 (www.justkannada.in): The members of the Constitution Protection Committee have called for a Mysuru bundh on February 7, condemning the incident of insulting Dr. B.R. Ambedkar in Raichur.
Addressing a press meet at Jaladarshini, the members informed that no action is taken against the judge, even after one week after the incident took place. “Even the government is neglecting the issue,” they alleged.
They also informed that a protest will be held along with the support of several other organizations and the bundh is organized demanding the government to suspend the judge.
Keywords: Mysuru bundh/ February 7/ Dr. B.R. Ambedkar/ Constitution Protection Committee