ಬೆಂಗಳೂರು,ಮಾರ್ಚ್,15,2023(www.justkannada.in): ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ಹೈವೇ ಕಾಮಗಾರಿ ಪೂರ್ಣವಾಗದಿದ್ದರೂ 1 ಕಿ.ಮೀಗೆ 2ರೂ. ನಂತೆ ಟೋಲ್ ಸಂಗ್ರಹ ಮಾಡುತ್ತಿದ್ದಾರೆ ಎಂದು ಸಂಸದ ಡಿ.ಕೆ ಸುರೇಶ್ ಕಿಡಿಕಾರಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಸುರೇಶ್, ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇ ಕಾಮಗಾರಿ ಇನ್ನೂ ಪೂರ್ಣ ಆಗಿಲ್ಲ. ಆದರೂ ಟೋಲ್ ಸಂಗ್ರಹಿಸುತ್ತಿದ್ದಾರೆ . ಯಾವ ವೈಜ್ಞಾನಿಕ ಆಧಾರದ ಮೇಲೆ ಟ್ಯಾಕ್ಸ್ ಹಾಕುತ್ತಿದ್ದಾರೆ ಎಂದು ಪ್ರಶ್ನಿಸಿದರು.
ರಾಮನಗರದಿಂದ ತಮ್ಮ ಸ್ಪರ್ಧೆಗೆ ಒತ್ತಡ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಸುರೇಶ್, ವಿಧಾನಸಭಾ ಚುನಾವೆಯಲ್ಲಿ ನನ್ನ ಸ್ಪರ್ಧೆ ಬಗ್ಗೆ ರಾಷ್ಟ್ರೀಯ ನಾಯಕರು ಚರ್ಚೆ ಮಾಡಿಲ್ಲ. ನನ್ನ ವ್ಯಾಪ್ತಿಗೆ ಬರುವ ಎಲ್ಲಾ ಕ್ಷೇತ್ರಗಳಿಗೂ ನಾನೇ ಅಭ್ಯರ್ಥಿ . ಆರ್ ಆರ್ ನಗರ, ಆನೇಕಲ್, ರಾಮನಗದಿಂದ ಒತ್ತಡವಿದೆ. ರಾಮನಗರಕ್ಕೆ ಇಕ್ಬಾಲ್ ಹುಸೇನ್ ಹೆಸರು ಶಿಫಾರಸು ಮಾಡಲಾಗಿದೆ ಎಂದರು.
ಉರಿಗೌಡ ನಂಜೇಗೌಡರ ಬಗ್ಗೆ ಸಚಿವ ಅಶ್ವತ್ ನಾರಾಯಣ್ ಹೇಳಲಿ. ಉರಿಗೌಡ ದೊಡ್ಡ ನಂಜೇಗೌಡ ಎಲ್ಲಿ ಸಿಕ್ಕಿದರು ಎಂದು ಹೇಳಲಿ ಎಂದು ಅಶ್ವಥ್ ನಾರಾಯಣ್ ಗೆ ಡಿ.ಕೆ ಸುರೇಶ್ ಟಾಂಗ್ ಕೊಟ್ಟರು.
Key words: Mysore-Bangalore -Express Highway – not completed -Toll collection-DK Suresh