ರೈಲ್ವೆ ಪ್ರಯಾಣ ಟಿಕೆಟ್‌ ಖರೀದಿಗೆ ರಿಸರ್ವೇಷನ್ ಕೌಂಟರ್‌ ಆರಂಭಿಸಿದ ಇಲಾಖೆ

 

ಮೈಸೂರು, ಮೇ 22, 2020 : ( www.justkannada.in news ) ರೈಲ್ವೆ ಟಿಕೆಟ್‌ ಖರೀದಿಗೆ ರಿಸರ್ವೇಷನ್ ಕೌಂಟರ್‌ ಗಳನ್ನು ಹಂತ ಹಂತವಾಗಿ ತೆರೆಯಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಮೊದಲಿಗೆ, ಪ್ರಮುಖ ನಿಲ್ದಾಣಗಳಲ್ಲಿನ ಕೌಂಟರ್‌ಗಳನ್ನು ಇಂದಿನಿಂದಲೇ ( ಮೇ 22) ತೆರೆಯಲಾಗುತ್ತದೆ ಜತೆಗೆ ಜೂ. 1 ರಿಂದ ಪ್ರಾರಂಭವಾಗುವ 100 ಜೋಡಿ ರೈಲು ಸೇವೆಗಳಿಗೆ ಕಾಯ್ದಿರಿಸಿದ ಟಿಕೆಟ್‌ ಬುಕ್ ಮಾಡಲು ನೈರುತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ಪಿಆರ್‌ಎಸ್ ಕೌಂಟರ್‌ಗಳು ಮೈಸೂರು, ದಾವಣಗೆರೆ, ಶಿವಮೊಗ್ಗ ಟೌನ್, ಹಾಸನ ನಿಲ್ದಾಣಗಳಲ್ಲಿ ಇಂದಿನಿಂದ ಕಾರ್ಯನಿರ್ವಹಿಸಲಿವೆ.

ದೇಶದಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ರದ್ದುಪಡಿಸಲಾಗಿದ್ದ ರೈಲು ಗಾಡಿಗಳಲ್ಲಿ ಟಿಕೆಟ್ ಹೊಂದಿದ್ದ ಪ್ರಯಾಣಿಕರ ಹಣ ಮರುಪಾವತಿಯ ಸೌಲಭ್ಯವನ್ನು ಸಹ ಈ ಕೌಂಟರ್ ಗಳಲ್ಲಿ ಮೇ 25 ರಿಂದ ಪಡೆಯಬಹುದು.

 mysore-bangalore-train-reservation- ticket-counter-started-southern-railways

ಈ ಮೊದಲು ತಿಳಿಸಿದಂತೆ, ರಾಜ್ಯದೊಳಗೆ 2 ಜೋಡಿ ಅಂತರ್ ಜಿಲ್ಲಾ ರೈಲುಗಳ ಸಂಚಾರವನ್ನು ಇಂದಿನಿಂದಲೇ ಪ್ರಾರಂಭಿಸಲಾಗಿದೆ.
ಬೆಂಗಳೂರಿನಿಂದ ಬೆಳಗಾವಿಗೆ (ವಾರದಲ್ಲಿ ಮೂರು ದಿನ) ಎಕ್ಸ್ ಪ್ರೆಸ್ ವಿಶೇಷ ರೈಲು ಹಾಗೂ ಬೆಂಗಳೂರಿನಿಂದ ಮೈಸೂರಿಗೆ (ಭಾನುವಾರ ಹೊರತು ಪಡಿಸಿ ವಾರದಲ್ಲಿ ಆರು ದಿನ) ಎಕ್ಸ್ ಪ್ರೆಸ್ ವಿಶೇಷ ರೈಲು ಸಂಚರಿಸಲಿದೆ.

ಸಾಮಾಜಿಕ ಅಂತರ ಮತ್ತು ಇತರೆ ನಿಗದಿತ ಕೋವಿಡ್-19 ಕ್ರಮವಿದಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಬುಕಿಂಗ್ ಕಛೇರಿಗಳು ಸೇರಿದಂತೆ ರೈಲ್ವೆಯ ಆವರಣದಲ್ಲಿ ಸ್ವಚ್ಛತೆ/ನೈರ್ಮೂಲತೆಯನ್ನು ಕಾಪಾಡಿಕೊಳ್ಳಲು ರೈಲ್ವೆಗೆ ಸಹಕಾರ ನೀಡಲು ರೈಲ್ವೆ ಗ್ರಾಹಕರಲ್ಲಿ ಈ ಮೂಲಕ ಕೇಳಿಕೂಳ್ಳಲಾಗಿದೆ. ಮೈಸೂರು-ಕೆ ಎಸ್ ಆರ್ ಬೆಂಗಳೂರು ಎಕ್ಸ್ ಪ್ರೆಸ್ ವಿಶೇಷ ರೈಲಿನ ಮೊದಲ ಸೇವೆಯು ಇಂದು ಮೈಸೂರಿನಿಂದ ನಿಗದಿತ ಸಮಯವಾದ 13:45 ಗಂಟೆಗೆ ಹೊರಟಿತು ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

key words : mysore-bangalore-train-reservation- ticket-counter-started-southern-railways