ಮೈಸೂರು, ಜೂ, 3, 2020(www.justkannada.in): ಮೈಸೂರಿನ ಟೈಂ ಸರಿ ಇಲ್ಲ...!
ಹೌದು. ನಗರದ ದೊಡ್ಡ ಗಡಿಯಾರ ಕೆಟ್ಟುನಿಂತಿದೆ! ಐತಿಹಾಸಿಕ ಸ್ಮಾರಕ ನಿರ್ವಹಣೆಯಲ್ಲಿ ಮೈಸೂರು ನಗರ ಪಾಲಿಕೆ ವಿಫಲವಾಗಿದೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಪಟ್ಟಾಭಿಷೇಕದ ಬೆಳ್ಳಿಹಬ್ಬಕ್ಕೆ ನಿರ್ಮಿಸಿದ್ದ ಕ್ಲಾಕ್ ಟವರ್ ನ ಗಡಿಯಾರದ ಮುಳ್ಳುಗಳು ಆಗಾಗ್ಗೆ ನಡೆಯುವುದಿಲ್ಲ! ಇದರ ಸೂಕ್ತ ನಿರ್ವಹಣೆಯಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮ ದಿನೋತ್ಸವದ ಸಂದರ್ಭದಲ್ಲೇ ದೊಡ್ಡ ಗಡಿಯಾದ ದುರಸ್ಥಿಗೆ ಬಂದಿದೆ. ಅರಮನೆಗಳ ನಗರಿಗೆ ಪಾರಂಪರಿಕ ಕಟ್ಟಡಗಳಲ್ಲೇ ಅತ್ಯಂತ ವಿಶೇಷವಾದ ಕ್ಲಾಕ್ ಟವರ್ ನ ಮಹತ್ವವನ್ನು ಅರಿಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಅಸಮಾಧಾನ ವ್ಯಕ್ತವಾಗಿದೆ.
90 ಅಡಿ ಎತ್ತರದ ದೊಡ್ಡ ಗಡಿಯಾರವನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕೆಂಬ ಆಗ್ರಹ ಕೇಳಿ ಬಂದಿದೆ!