ಮೈಸೂರು,ಮಾ,18,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಕ್ಕಿಜ್ವರ ಕಂಡು ಬಂದಿರುವ ಹಿನ್ನೆಲೆ ಗುರುತಿಸಲಾಗಿರುವ ಪಕ್ಷಿಗಳನ್ನ ಕೊಲ್ಲಲಾಗುತ್ತಿದ್ದು ಇಂದು ಸಹ ಪಕ್ಷಿ ಸಂಹಾರ ಮುಂದುವರೆಯಲಿದೆ.
ನೆನ್ನೆ ರ್ಯಾಪಿಡದ ರೆಸ್ಪಾನ್ಸ್ ಟೀಮ್ 4100 ಪಕ್ಷಿಗಳನ್ನ ಕೊಲ್ಲಲಾಗಿತ್ತು. ವೈಜ್ಞಾನಿಕವಾಗಿ 4100 ಪಕ್ಷಿಗಳನ್ನ ಕೊಲ್ಲಲಾಗಿತ್ತು. ಉಳಿದ ಪಕ್ಷಿಗಳ ಕಲ್ಲಿಂಗ್ ಕಾರ್ಯ ಇಂದು ಮುಂದುವರೆಯಲಿದೆ. ಹಕ್ಕಿಜ್ವರ ಹಿನ್ನೆಲೆ ಸಿಬ್ಬಂದಿಗಳು ವೈಜ್ಞಾನಿಕವಾಗಿ ಹಕ್ಕಿಗಳ ವಧೆ ಕಾರ್ಯ ಕೈಗೊಂಡಿದ್ದು, ಯಾವುದೇ ಸೋಂಕು ಹರಡದಂತೆ ಔಷಧಿ ಸಿಂಪಡಿಸಿ ಕಾರ್ಯಚರಣೆ ನಡೆಸಲಾಗುತ್ತಿದೆ.
ಮೈಸೂರಿನಲ್ಲಿ ಹಕ್ಕಿ ಜ್ವರ ಇರುವುದು ಖಾತ್ರಿ ಹಿನ್ನೆಲೆ, ಮೈಸೂರು ಜಿಲ್ಲಾಡಳಿತ ಪಕ್ಷಿ ಸರ್ವೇ ನಡೆಸಿ ಪಕ್ಷಿಗಳನ್ನ ಗುರುತಿಸಲಾಗಿತ್ತು. ಜಿಲ್ಲಾಡಳಿತದಿಂದ ಪಕ್ಷಿ ಸರ್ವೇ ಕಾರ್ಯ ನಡೆಸಿದ ಅಧಿಕಾರಿಗಳು ಒಟ್ಟು 6436 ಪಕ್ಷಿಗಳನ್ನು ಗುರುತಿಸಿದ್ದರು. ಗುರುತಿಸಿದ ಅಷ್ಟೂ ಪಕ್ಷಿಗಳನ್ನೂ ನಾಶಪಡಿಸಲು ಜಿಲ್ಲಾಡಳಿತ ನಿರ್ಧಾರ ಮಾಡಿತ್ತು.
Key words: Mysore-bird flue-kill-birds -continue -today.