ಮೈಸೂರಿನಲ್ಲಿ ಹಕ್ಕಿಜ್ವರದ ಭೀತಿ ಹಿನ್ನೆಲೆ: ಬೆಳ್ಳಂಬೆಳಿಗ್ಗೆ ಕೆರೆಗಳನ್ನ ಪರಿಶೀಲಿಸಿದ ಶಾಸಕ ಎಲ್. ನಾಗೇಂದ್ರ….

ಮೈಸೂರು,ಮಾ,12,2020(www.justkannada.in): ಮೈಸೂರಿನಲ್ಲಿ ಹಕ್ಕಿ ಜ್ವರ ಭೀತಿ ಹಿನ್ನಲೆ. ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಬೆಳ್ಳಂಬೆಳಗೆ ಕ್ಷೇತ್ರದ ಕೆರೆಗಳ ಪರಿಶೀಲನೆ ನಡೆಸಿದರು.

ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆರೆಗಳಿಗೆ ಶಾಸಕ ಎಲ್.ನಾಗೇಂದ್ರ ಭೇಟಿ ನೀಡಿ ಪರಿಶಿಲಿಸಿದರು. ನಗರದ ಕುಕ್ಕರಳ್ಳಿ ಕೆರೆ, ಹೆಬ್ಬಾಳ ಕೆರೆ ಪರಿಶೀಲಿಸಿದರು. ಕಳೆದ ಕೆಳ ದಿನಗಳಿಂದ ಕೆರೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಕೊಕ್ಕರೆಗಳು ಹಾಗೂ ನೆನ್ನೆ ಮೆಟಗಳ್ಳಿಯಲ್ಲಿ 12 ಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿದ್ದವು. ಈ ಹಿನ್ನಲೆ ಕೆರೆಗಳು ಹಾಗೂ ಮೆಟಗಳ್ಳಿ ಕೋಳಿಫಾರಂ ಮಾಲೀಕ ರಾಮು ಮನೆಗೆ ಭೇಟಿ ನೀಡಿ ಶಾಸಕ ಎಲ್ ನಾಗೇಂದ್ರ ಪರಿಶೀಲನೆ ನಡೆಸಿದರು.mysore-bird-flue-mla-l-nagendra-visit-lake

ಶಾಸಕ ಎಲ್. ನಾಗೇಂದ್ರ ಅವರಿಗೆ ಆರೋಗ್ಯ ಇಲಾಖೆ, ಪಶುಪಾಲನಾ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸಾಥ್ ನೀಡಿದರು.

ಬಳಿಕ ಮಾತನಾಡಿದ ಶಾಸಕ ನಾಗೇಂದ್ರ, ಮೃತ ಹಕ್ಕಿಗಳನ್ನ ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಲಾಗಿತ್ತು, ಲ್ಯಾಬಿನಲ್ಲಿ ನೆಗೆಟಿವ್ ರಿಪೋರ್ಟ್ ಬಂದಿದೆ, ಸದ್ಯಕ್ಕೆ ಯಾವುದೇ ಭಯ ಪಡುವಂತ ಅವಶ್ಯಕತೆ ಇಲ್ಲ. ಎಲ್ಲಾ ಅಧಿಕಾರಿಗಳಿಗೂ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಳ್ಳವಂತೆ ಈಗಾಗಲೇ ಆದೇಶ ಮಾಡಲಾಗಿದೆ. ಪ್ರಮುಖವಾಗಿ ರಸ್ತೆಗಳಲ್ಲಿ ಮಟನ್,ಚಿಕನ್ ಕತ್ತರಿಸುವುದನ್ನ ನಿಯಂತ್ರಿಸಲು ಆದೇಶ ನೀಡಲಾಗಿದೆ ಎಂದು ತಿಳಿಸಿದರು.

Key words: mysore-bird flue-MLA-L.Nagendra- visit-lake