ಬರ್ತ್ ಡೇ ಚಾಕೊಲೆಟ್ ತಿಂದು ವಿದ್ಯಾರ್ಥಿಗಳು ಅಸ್ವಸ್ಥ

 

ಮೈಸೂರು, ಅ.31, 2019 : (www.justkannada.in news ) ಹುಟ್ಟು ಹಬ್ಬದ ಸಲುವಾಗಿ ನೀಡಿದ ಚಾಕೊಲೇಟ್ ಸೇವಿಸಿ ನಗರದ ಶಾಲೆಯೊಂದರ 15 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ನಡೆದಿದೆ.

ನಳಂದ ಸ್ಕೂಲ್ ನ ೫ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೇ ಚಾಕೊಲೆಟ್  ಸೇವಿಸಿ ಅಸ್ವಸ್ಥಗೊಂಡವರು.
ಇಂದು ಮಧ್ಯಾಹ್ನ ಸುಮಾರು ಎರಡುವರೆ ಗಂಟೆ ಸಮಯದಲ್ಲಿ ಚಾಕೊಲೆಟ್  ಸೇವೆನೆ ಮಾಡಿದ್ದ ವಿದ್ಯಾರ್ಥಿಗಳು

ನಂತರ ಅಸ್ವಸ್ಥಗೊಂಡರು. ಕೂಡಲೇ ಈ ಮಕ್ಕಳನ್ನ ಶಾಲಾ ವಾಹನದ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ವಿದ್ಯಾರ್ಥಿಯ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಚಾಕೊಲೆಟ್  ವಿತರಣೆ ಮಾಡಲಾಗಿತ್ತು. ಎಕ್ಲೆರ್ರಸ್ ಕಂಪನಿ ಚಾಕೊಲೆಟ್  ತಿಂದು ಅಸ್ವಸ್ಥರಾಗಿದ್ದ ವಿದ್ಯಾರ್ಥಿಗಳು. ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದ ಕೆ.ಆರ್. ಠಾಣೆ ಪೋಲಿಸರು.

key words : mysore-bithday-boy-chacolate-students-ill-hospitalised