ಮೈಸೂರು, ಫೆ.2, 2020 : (www.justkannada.in news) : ನಾನು ಮಂತ್ರಿ ಆಗಲೇಬೇಕು ಎಂದು ಆಸೆ ಇಟ್ಟುಕೊಂಡಿದ್ದವನಲ್ಲ. ಮಂತ್ರಿ ಆಗಬೇಕು ಎಂದು ಯಡಿಯೂರಪ್ಪ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದವನು. ಇವತ್ತು ಆಗಿಲ್ಲ ಅಂತ ಆಕಾಶ ಬಿದ್ದೋಗಿಲ್ಲ. ಮೈಸೂರಿನಲ್ಲಿ ಹೆಚ್.ವಿಶ್ವನಾಥ್ ಹೇಳಿಕೆ.
ಮಾಧ್ಯಮಗಳ ಜತೆ ಮಾತನಾಡಿದ ವಿಶ್ವನಾಥ್ ಹೇಳಿದಿಷ್ಟು….
ಮಂತ್ರಿ ಮಾಡೋದು ಬಿಡೋದು ಯಡಿಯೂರಪ್ಪ ಗೆ ಬಿಟ್ಟಿರೋದು. ಅದನ್ನು ನಡೆಸಿಕೊಳ್ಳೋದು ಬಿಡೋದು ಯಡಿಯೂರಪ್ಪ ಅವರ ಧರ್ಮ. ಎಲ್ಲರಿಗೂ ಕೊಟ್ಟಂತೆ ಮಂತ್ರಿಮಂಡಲದಲ್ಲಿ ಸ್ಥಾನ ಮಾಡಿಕೊಡುವಂತೆ ನನಗೂ ಮಾತು ಕೊಟ್ಟಿದ್ದಾರೆ. ಎಲ್ಲರಿಗೂ ನಡೆಸಿದ್ದಾರೆ, ಇನ್ನೊಂದಷ್ಟು ಜನರಿಗೆ ಮಾಡುತ್ತಾರೆ. ಅವರು ಯಾರಿಗೆ ಕೊಡುತ್ತಾರೋ ಬಿಡುತ್ತಾರೋ ಗೊತ್ತಿಲ್ಲ.
ಸೋತವರಿಗೆ ಸ್ಥಾನ ಕೊಡದಿರಲು ಕಾನೂನಿನ ನಿರ್ಭಂದ ಇದೆ ಅಂದಿದ್ದಾರೆ.ಆದರೆ ಕಾನೂನಿನಲ್ಲಿ ಯಾವುದೇ ನಿರ್ಭಂದ ಇಲ್ಲ. ಸೋತವರಿಗೆ ಸಚಿವ ಸ್ಥಾನ ನೀಡಲು ಸುಪ್ರೀಂ ತೀರ್ಪು ಅಡ್ಡಿ ಎಂಬ ಹೇಳಿಕೆ ವಿಚಾರ.
ಸುಪ್ರಿಂ ಚುನಾವಣೆಗೆ ನಿಂತು ಪವಿತ್ರರಾಗಿ ಎಂದಿತ್ತು. ನಾವು ಚುನಾವಣೆಗೆ ಅರ್ಜಿ ಹಾಕುತ್ತಿದ್ದಂತೆ ಪವಿತ್ರರಾದೆವು.
ತೀರ್ಪಿನಲ್ಲಿ ಸೋಲು ಗೆಲುವಿನ ಉಲ್ಲೇಖವಿಲ್ಲ. ಅದನ್ನು ಯಡಿಯೂರಪ್ಪ ಅವರು ಕಾನೂನು ತಜ್ಞರನ್ನು ಕರೆಸಿ ಕೇಳಿಕೊಳ್ಳಲಿ. ಮೈಸೂರಿನಲ್ಲಿ ಹೆಚ್.ವಿಶ್ವನಾಥ್ ಹೇಳಿಕೆ.
ನಮಗೆ ಸಚಿವ ಸ್ಥಾನ ಕೊಡೊದು ಬಿಡೋದು ಬೇರೆ. ಆದರೆ ಕಾನೂನು ಅಡ್ಡಿ ಅನ್ನೋದನ್ನ ಸೋತವರು ಒಪ್ಪಲ್ಲ, ಕಾನೂನೂ ಒಪ್ಪಲ್ಲ. ಸಾರ್ವಜನಿಕರ ಮನಸ್ಸಿನಲ್ಲಿ ಇದು ಬರಬಾರದು. ಹೆಚ್.ವಿಶ್ವನಾಥ್ ಹೇಳಿಕೆ.
key words : mysore-bjp-adaguru-vishwanath-cabinet-minister-controversy