ಮೈಸೂರು, March 29, 2024 : (www.justkannada.in news) ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಗೆಲ್ಲೋದು ಅರ್ಧ ಮಾತ್ರ. ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಗೆಲ್ಲೋದು ಕಷ್ಟ. ಯಾಕಂದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಸ್ಟ್ರಾಂಗ್ ಇದೆ.
ನಾಡಿನ ಹಿರಿಯ ಸಾಹಿತಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪರ ಒಲವು ಹೊಂದಿರುವ ಎಸ್.ಎಲ್.ಭೈರಪ್ಪ ಮೈಸೂರಿನಲ್ಲಿ ಈ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದರು.
ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ (BJP) ಅಭ್ಯರ್ಥಿ ಯದುವೀರ್ ( yaduveer) ಹಾಗೂ ಬಿಜೆಪಿ ಮುಖಂಡರು ಇಂದು ಕುವೆಂಪುನಗರದ ಎಸ್.ಎಲ್.ಬೈರಪ್ಪ ನಿವಾಸಕ್ಕೆ ಭೇಟಿಗಾಗಿ ತೆರಳಿದ್ದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಬೈರಪ್ಪ ಹೇಳಿದಿಷ್ಟು..
ಕರ್ನಾಟಕದಲ್ಲಿ ಬಿಜೆಪಿ ಬಹಳ ವೀಕ್ ಇದೆ. ಕಳೆದ ಬಾರಿ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿಯವರು, ಸರಕಾರವನ್ನು ಸರಿಯಾಗಿ ನಡೆಸಲಿಲ್ಲ. ಈ ಅಂಶವನ್ನು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಬಹಳ ಚೆನ್ನಾಗಿ ಬಳಸಿಕೊಂಡಿತು.
ಕಾಂಗ್ರೆಸ್ ( congress ) ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕ ಸ್ಥಿತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದನ್ನು ಮರೆ ಮಾಚಲು ಕಾಂಗ್ರೆಸ್ , ಕೇಂದ್ರದ ಕಡೆ ಬೊಟ್ಟು ಮಾಡುತ್ತಿದೆ. ಜತೆಗೆ ಕೇಂದ್ರದಿಂದ ಬಂದ ಅನುದಾನವನ್ನು ಫ್ರೀ ಬೀಸ್ ಗೆ ಬಳಸಿಕೊಳ್ಳುತ್ತಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಮಾದರಿ ರಾಜ್ಯದಲ್ಲಿ ಸರ್ಕಾರ ಇದ್ದಿದ್ರೆ ಹೆಚ್ಚು ಸೀಟ್ ಗೆಲ್ಲಬಹುದಿತ್ತು.
ಮೋದಿ ( modi ) ಅಲೆ ಕಡಿಮೆ ಆಗಿದೆಯೋ, ಇಲ್ವೋ ಗೊತ್ತಿಲ್ಲ. ಆದರೆ ಈ ಬಾರಿಯೂ ಕೇಂದ್ರದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗ್ತಾರೆ. ಮೈಸೂರಿನಲ್ಲಿ ಸಾಹಿತಿ ಎಸ್.ಎಲ್ ಭೈರಪ್ಪ ಹೇಳಿಕೆ.
Key words : Mysore , bjp, Birappa, election
Summary :
BJP will win only half this time in Karnataka. It is difficult for BJP to win much in Karnataka. Because Congress is strong in the state. Senior literary figure of the country, Prime Minister Narendra Modi and BJP supporter SL Bhairappa surprised by making this statement in Mysore.