ಮೈಸೂರು,ಏಪ್ರಿಲ್,12,2023(www.justkannada.in): ಕಳೆದ ಎರಡು ಬಾರಿ ನನ್ನನ್ನ ಸೋಲಿಸಿದ್ದೀರಿ. ಈ ಬಾರಿ ನನ್ನ ಕೊನೆಯ ಚುನಾವಣೆ ಅಷ್ಟೇ. ನಾನು ಮತ್ತೆ ಸೋತರೆ ಸ್ಪರ್ಧೆ ಮಾಡುವುದಿಲ್ಲ ಎಂದು ಎನ್ ಆರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಮೇಯರ್ ಸಂದೇಶ್ ಸ್ವಾಮಿ ಸೋಲನ್ನ ನೆನೆದು ಕಣ್ಣೀರಿಟ್ಟರು.
ಎನ್ ಆರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಕಾರ್ಯಕರ್ತರ ಜೊತೆ ಸಭೆ ನಡೆಸಿದ ಸಂದೇಶ್ ಸ್ವಾಮಿ, ಕಾರ್ಯಕರ್ತರು ಈ ಬಾರಿ ಹುಮ್ಮಸ್ಸಿನಿಂದ ಕೆಲಸ ಮಾಡಬೇಕು. ಯಾರೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಈ ಬಾರಿ ನನಗೆ ಒಂದು ಅವಕಾಶ ಮಾಡಿಕೊಟ್ಟರೆ ನಾನು ಸತ್ತರೂ ಕೂಡ ಸಂದೇಶ ಸ್ವಾಮಿ ಅವರ ಕುರುಹು ಎನ್ ಆರ್ ಕ್ಷೇತ್ರದಲ್ಲಿ ಉಳಿಯಬೇಕು ಹಾಗೆ ಕೆಲಸ ಮಾಡುವ ಬಯಕೆ ಹೊಂದಿದ್ದೇನೆ. ಎಲ್ಲರು ನನಗೆ ಈ ಬಾರಿ ಒಂದು ಅವಕಾಶ ಮಾಡಿಕೊಡಿ ಎಂದು ಕಣ್ಣೀರಿಟ್ಟು ಮತಯಾಚನೆ ಮಾಡಿದರು.
ಕ್ಷೇತ್ರದಲ್ಲಿ ಇರುವ ಶಾಸಕರ ಮೇಲೆ ಅವರ ಸಮುದಾಯದ ಜನರ ವಿರೋಧ ಇದೆ. ಅವರು ಒಳ್ಳೆಯ ಕೆಲಸ ಕಾರ್ಯಗಳನ್ನ ಮತ್ತು ಜನರ ಜೊತೆ ಉತ್ತಮವಾಗಿ ಸ್ಪಂದಿಸುವ ಕೆಲಸ ಮಾಡಿದ್ರೆ ಅವರ ಮೇಲೆ ಯಾಕೆ ಹಲ್ಲೆ ನಡೆಯುತ್ತಿತ್ತು. ಅವರು ಐದು ಬಾರಿ ಗೆದ್ದಿದ್ದರೂ ಕೂಡ ಕ್ಷೇತ್ರದಲ್ಲಿ ಇನ್ನೂ ಕೂಡ ಸ್ಲಂಗಳನ್ನ ಮುಕ್ತ ಮಾಡಿಲ್ಲ. ವಸತಿ, ಆರೋಗ್ಯ, ಶಿಕ್ಷಣ ಸಮಸ್ಯೆಗಳು ಕ್ಷೇತ್ರದ ದೊಡ್ಡ ಸಮಸ್ಯೆಯಾಗಿದ. ಜನ ಇದನ್ನ ಅರ್ಥ ಮಾಡಿಕೊಂಡು ಹೊಸಮುಖಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಸಂದೇಶ್ ಸ್ವಾಮಿ ಮನವಿ ಮಾಡಿದರು.
Key words: mysore-BJP candidate -Sandesh Swamy – tears – meeting.