ಮೈಸೂರು, ನ.04, 2022 : (www.justkannada.in news) ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೂತನ ಕಟ್ಟಡ ಕಾಮಗಾರಿಗೆ ಶಾಸಕ ಎಸ್.ಎ.ರಾಮದಾಸ್ ಭೂಮಿ ಪೂಜೆ ನೆರವೇರಿಸಿದರು.
ಮೈಸೂರು ನಗರ, ನಾಚನಹಳ್ಳಿ, ಕುಪ್ಪಲೂರು, ೩ನೇ ಹಂತ, ಎ ವಲಯ ಬಡಾವಣೆಯಲ್ಲಿನ ನಾಗರೀಕ ಸೌಕರ್ಯ ನಿವೇಶನ ಮೈಸೂರಿನ ಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಮಂಜೂರಾಗಿದ್ದು, ಸದರಿ ನಿವೇಶದಲ್ಲಿ ಕಟ್ಟಡ ನಿರ್ಮಾಣ ಮಾಡಲು, ಸರ್ಕಾರ 4.10 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.
ಈ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಬೆಂಗಳೂರಿನ ರೈಟ್ಸ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿಗೆ ಇಂದು ಶಾಸಕ ಎಸ್ಎ ರಾಮದಾಸ್ ಭೂಮಿ ಪೂಜೆ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಮೈಸೂರಿನ ಮೇಯರ್ ಶಿವಕುಮಾರ್, ಉಪಮೇಯರ್ ಡಾ|| ರೂಪ, ನಗರಪಾಲಿಕೆ ಸದಸ್ಯೆ ಶಾರದ ಈಶ್ವರ್, ಕಾಲೇಜು ಅಭಿವೃದ್ದಿ ಮಂಡಳಿಯ ಸದಸ್ಯರು, ಕಾಲೇಜಿನ ಪ್ರಂಶುಪಾಲರಾದ ಡಾ. ರಾಗಿಣಿ ಎನ್, ಅಧ್ಯಾಪಕರು, ಸಿಬ್ಬಂದಿವರ್ಗ , ವಿದ್ಯಾರ್ಥಿಗಳು ಹಾಗೂ ರೈಟ್ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.
key words : mysore-bjp-mla-ramadas-college-foundation