ಮೈಸೂರು,ಮಾರ್ಚ್,26,2024, (www.justkannada.in): ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಭಾವಚಿತ್ರ ಬಳಕೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಟಿ. ಎಸ್ ಶ್ರೀವತ್ಸ, ಎಸ್.ಟಿ ಸೋಮಶೇಖರ್ ಅವರ ಅನುಮತಿ ಇಲ್ಲದೆ ಭಾವಚಿತ್ರ ಬಳಕೆ ಮಾಡಿರೋದು ಅಕ್ಷಮ್ಯ ಅಪರಾಧ ಎಂದಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಶಾಸಕ ಟಿ. ಎಸ್ ಶ್ರೀವತ್ಸ, ಎಸ್ ಟಿ ಸೋಮಶೇಖರ್ ಅನುಮತಿ ಕೊಟ್ಟಿರುವುದಿಲ್ಲ. ಹೀಗಾಗಿ ಅವರ ಅಭಿಪ್ರಾಯ ಕೇಳಿ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಕೆಟ್ಟ ಸಂದೇಶ ರವಾನೆ ಮಾಡಲಿಕ್ಕೆ ರಾಜೀವ್ ಮುನ್ನಡೆ ಬರೆಯಲು ಮುಂದಾಗಿದ್ದಾರೆ. ಯಾವ ಪಾರ್ಟಿಯಲ್ಲಿ ಒಕ್ಕಲಿಗರು ಇಲ್ಲ. ಎಸ್ ಟಿ ಸೋಮಶೇಖರ್ ಒಕ್ಕಲಿಗ ಸಮುದಾಯದ ನಾಯಕರೇ. ಎಸ್ ಟಿ ಸೋಮಶೇಖರ್ ಜೊತೆ ಈ ಭಾಗದ ಎಂತೆಂತಹ ನಾಯಕರು ಇದ್ದಾರೆ. ಹೆಚ್.ಡಿ ದೇವೇಗೌಡ, ಕುಮಾರಸ್ವಾಮಿಯಂತಹ ಶ್ರೇಷ್ಠ ನಾಯಕರು ನಮ್ಮ ಜೊತೆ ಇಲ್ಲವೇ. ನಮಗೆ ಒಕ್ಕಲಿಗ ಸಮುದಾಯದ ಮತಗಳು ಅನ್ನೋ ಭಯ ಇಲ್ಲ. ಒಬ್ಬರು ಪಕ್ಷ ಸೇರೋದಕ್ಕೆ ಇನ್ನೊಬ್ಬರ ಭಾವಚಿತ್ರ ಬಳಕೆ ಮಾಡಿಕೊಳ್ಳೋದು ಸರಿಯಲ್ಲ. ಇದರ ಬಗ್ಗೆ ತನಿಖೆ ಆಗಬೇಕು. ನಾನು ಕೂಡ ಚುನಾವಣೆ ಆಯೋಗಕ್ಕೆ ದೂರು ನೀಡುತ್ತೇನೆ ಎಂದರು.
ಕೆ ಆರ್ ಕ್ಷೇತ್ರ ಭಾಗದ ಶಾಸಕರನ್ನ ಕಾಂಗ್ರೆಸ್ ಗೆ ಸೆಳೆಯುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಟಿ.ಎಸ್ ಶ್ರೀವತ್ಸ, ಕೆ.ವಿ ಮಲ್ಲೇಶ್ ಎಲ್ಲಿದ್ರು ಅನ್ನೋದನ್ನ ನಾನೇನು ಹೇಳಬೇಕಿಲ್ಲ. ರಾಜೀವ್ ಗೆ ಪಕ್ಷ ಎಲ್ಲವನ್ನ ನೀಡಿತ್ತು. ರಾಜ್ಯ ಮಟ್ಟದ ಜವಾಬ್ದಾರಿ, ನಗರದಲ್ಲಿ ಕೋರ್ ಕಮಿಟಿ ಜವಾಬ್ದಾರಿ ನೀಡಿತ್ತು. ಮೂಡಾದಲ್ಲಿ ಏನೇನು ಅಡಗಿದೆಯೋ ಗೊತ್ತಿಲ್ಲ ನಮಗೆ. ಎಲ್ಲವನ್ನು ಮರೆಮಾಚುವ ಸಲುವಾಗಿ ಕಾಂಗ್ರೆಸ್ ಗೆ ಹೋಗುತ್ತಿದ್ದಾರೆ. ರಾಜಕಾರಣದ ತಪ್ಪುಗಳನ್ನ ಮುಚ್ಚಿಕೊಳ್ಳಲಿಕ್ಕೆ ಕಾಂಗ್ರೆಸ್ ಗೆ ಹೋಗ್ತಿದ್ದಾರೆ. ಎಲ್ಲವನ್ನ ಅನುಭವಿಸಿ ಪಕ್ಷ ಬಿಡುತ್ತಿರುವುದಕ್ಕೆ ನಮಗೆ ಬೇಸರವಿದೆ. ಸಿದ್ದರಾಮಯ್ಯರಿಗೆ ಹೇಳಿ ಒಂದಷ್ಟು ಅನುದಾನ ತಡೆಯಬಹುದು ಅಷ್ಟೇ. ನಾವು ಎಲ್ಲದಕ್ಕೂ ಸಿದ್ದರಿದ್ದೇವೆ, ಅದಕ್ಕೆ ತಕ್ಕ ಉತ್ತರ ಕೊಡುತ್ತೇವೆ ಎಂದು ಟಾಂಗ್ ಕೊಟ್ಟರು.
ಯದುವೀರ್ ರವರ ಘನತೆ ಕಡಿಮೆ ಮಾಡುವಂತದ್ದೇನು ಮಾಡುತ್ತಿಲ್ಲ. ಯದುವೀರ್, ರಾಜಮನೆತನದ ಗೌರವ ಉಳಿಸಿಕೊಂಡೇ ಚುನಾವಣೆ ಎದುರಿಸುತ್ತೇವೆ ಎಂದು ಶಾಸಕ ಟಿ ಎಸ್ ಶ್ರೀವತ್ಸ ಹೇಳಿದರು.
Key words: mysore, BJP, MLA,TS Srivatsa