ಬೆಂಗಳೂರು, ನ.14, 2019 : (www.justkannada.in news ) ಅನರ್ಹ ಶಾಸಕರು ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಆದ್ರೆ ಪಕ್ಷದಲ್ಲಿ ಒಂದಷ್ಟು ಗೊಂದಲ ಇದೆ. ಇದು ಸಹಜ, ಆದಷ್ಟು ಬೇಗ ಎಲ್ಲವೂ ಸರಿಯಾಗಲಿದೆ. ಈ ಬಗ್ಗೆ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅಭಿಪ್ರಾಯಪಟ್ಟರು.
ಮೈಸೂರಿನಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಸಂಸದ ಪ್ರಸಾದ್ ಹೇಳಿದಿಷ್ಟು…….
ಪ್ರಮುಖವಾಗಿ ಹೊಸಕೋಟೆಯಲ್ಲಿ ಗೊಂದಲ ಏರ್ಪಟ್ಟಿದೆ. ಅಲ್ಲಿ ಬಿಜೆಪಿಯ ಸಂಸದರಾಗಿರುವ ಬಚ್ಚೇಗೌಡರಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದ ಎಂಟಿಬಿ ನಾಗರಾಜ್ ಈಗ ಬಿಜೆಪಿ ಸೇರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ಬಿಜೆಪಿ ಪರಾಜಿತ ಅಭ್ಯರ್ಥಿ ಶರತ್ ಬಚ್ಚೇಗೌಡ ಪಕ್ಷೇತರರಾಗಿ ಕಣಕಿಳಿದಿದ್ದಾರೆ. ಅವರಿಗೆ ಜೆ.ಡಿ.ಎಸ್ ಬೆಂಬಲ ನೀಡಿದೆ.
ಈ ಹಿಂದೆ ಬಚ್ಚೆಗೌಡರನ್ನು ಸೋಲಿಸಲೇ ಬೇಕೆಂದು ಹೆಚ್.ಡಿ ಕುಮಾರಸ್ವಾಮಿ ಪಾರ್ಲಿಮೆಂಟ್ ಚುನಾವಣೆಗೆ ಸ್ಪರ್ಧಿಸಿದ್ರು. ಈಗ ಅವರು ಬಚ್ಚೇಗೌಡರ ಪುತ್ರನಿಗೆ ಬೆಂಬಲ ನೀಡಿದ್ದಾರೆ. ಇದನ್ನು ಏನೆನ್ನಬೇಕು ಎಂದೇ ತಿಳಿಯುತ್ತಿಲ್ಲ.
ಸುಪ್ರಿಂಕೋರ್ಟ್ ನೀಡಿರುವ ತೀರ್ಪು ಸಮತೋಲನದಿಂದ ಕೂಡಿದೆ. ಮುಂದೆ ಎಲ್ಲದರ ಬಗ್ಗೆಯೂ ಚರ್ಚೆ ನಡೆಸಿ ಇರುವ ಗೊಂದಲ ಸರಿಪಡಿಸುತ್ತೇವೆ. ಚುನಾವಣೆಗೆ ಬೇಕಾದ ತಯಾರಿ ನಡೆಸಿದ್ದೇವೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ನಾಳೆ ಘೋಷಣೆಯಾಗಲಿದೆ.
ಬೆಂಗಳೂರು ಶಿವಾಜಿನಗರ ಕ್ಷೇತ್ರದಲ್ಲಿ ರೋಷನ್ ಬೇಗ್ ಅಥವಾ ಅವರ ಮಗನಿಗೆ ಟಿಕೆಟ್ ಕೊಡುವ ಬಗ್ಗೆಯೂ ಚರ್ಚೆ ನಡೆದಿದೆ.
ಹುಣಸೂರು ಉಪ ಚುನಾವಣೆ ಹಿನ್ನಲೆ. ಅಡಗೂರು ಎಚ್. ವಿಶ್ವನಾಥ್ ಇವತ್ತು ಪಕ್ಷ ಸೇರ್ಪಡೆ ಆಗಿದ್ದಾರೆ. ಹುಣಸೂರು ಬಿಜೆಪಿ ಅಭ್ಯರ್ಥಿಯಾಗಿ ಯಾರು ನಿಲ್ತಾರೆಂದು ಪಕ್ಷ ತೀರ್ಮಾನ ಮಾಡಲಿದೆ. ಪಕ್ಷದ ಕೋರ್ ಕಮಿಟಿಯಲ್ಲಿ ಈ ಬಗ್ಗೆ ತೀರ್ಮಾನ ಮಾಡಲಿದೆ. ಅದಕ್ಕೆ ಎಲ್ಲರು ಬದ್ಧರಾಗಿರುತ್ತಾರೆ. ನಾನು ಕೂಡ ಉಪಚುನಾವಣೆ ಪ್ರಚಾರಕ್ಕೆ ಹೋಗುತ್ತೇನೆ. ನಾನು ಎಂಪಿ ಆಗಿದ್ದುಕೊಂಡು ಹೋಗಲೇಬೇಕು. ಮೈಸೂರಿನ ರೈಲು ನಿಲ್ದಾಣದಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿಕೆ.
key words : mysore-bjp-mp-shrinivasa.prasad