ಮೈಸೂರು, ಆ.04, 2021 : (www.justkannada.in news ) ಇದು ಕೃಷ್ಣರಾಜ ಕ್ಷೇತ್ರಕ್ಕೆ ದುಃಖದ ದಿನವಲ್ಲ, ಬದಲಾಗಿ ಇದು ಸವಾಲಿನ ದಿನ. ನಿರೀಕ್ಷೆ ಇದ್ದಿದ್ದು ನಿಜ..! ನಾನು ಮಿಲಿಟರಿ ಅಧಿಕಾರಿ ಮಗ. ಮಿಲಿಟರಿ ಅಧಿಕಾರಿಯ ರಕ್ತ ನನ್ನ ಮೈನಲ್ಲಿ ಹರಿಯುತ್ತಿದೆ. ನಾನು ಯಾವುದಕ್ಕೂ ಬೇಸರಪಟ್ಟು ಕೊಳ್ಳುವುದಿಲ್ಲ.
ಮೈಸೂರಿನಲ್ಲಿ ಶಾಸಕ ಎಸ್.ಎ.ರಾಮದಾಸ್ ಹೇಳಿಕೆ. ಸಚಿವ ಸಂಪುಟದಲ್ಲಿ ಅವಕಾಶ ವಂಚಿತರಾದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ರಾಮದಾಸ್ ಹೇಳಿದಿಷ್ಟು…
ಮೈಸೂರು ಜಿಲ್ಲೆಗೆ ಪ್ರಾತಿನಿಧ್ಯ ಸಿಗುತ್ತೆ ಅಂತಾ ಅಂದು ಕೊಂಡೆವು. ಪಕ್ಷವನ್ನು ನಿರಂತರವಾಗಿ ಸಂಘಟಿಸಿದ್ದೇನೆ. ರಾಜ್ಯಕ್ಕೆ ಏನೂ ಕೆಲಸ ಮಾಡಬೇಕೆಂದು ಕನಸು ಇಟ್ಟುಕೊಂಡಿದ್ದೆ. ಅದನ್ನು ಈಗ ಕೆ.ಆರ್. ಕ್ಷೇತ್ರಕ್ಕೆ ಮಾಡುತ್ತೇನೆ. ಇದು ದುಃಖದ ದಿನವಲ್ಲ. ಸವಾಲಿನ ದಿನವಾಗಿ ಸ್ವೀಕರಿಸಿ ಪಕ್ಷವನ್ನು ಸಂಘಟಿಸುತ್ತೇನೆ. ನಾನು ನೋವಿನಲ್ಲಿ ಇಲ್ಲ. ಮಂತ್ರಿಯ ಸ್ಥಾನ ಇಲ್ಲದಿದ್ದರು ಕೆಲಸ ಮಾಡುತ್ತೇನೆ.
ಬಿಎಸ್ವೈ ಮೊನ್ನೆ ನನ್ನ ಹೆಸರು ಪಟ್ಟಿಯಲಿದೆ ಅಂತಾ ನನಗೆ ಹೇಳಿದ್ದರು. ನಿನ್ನಂಥವನೂ ಮಂತ್ರಿ ಆಗಬೇಕು. ಅದಕ್ಕೆ ಪಟ್ಟಿಯಲ್ಲಿ ಹೆಸರು ಸೇರಿಸಿದ್ದೇನೆ ಎಂದು ಹೇಳಿದರು. ಲಾಬಿಯಲ್ಲಿ ನಂಬಿಕೆ ಇಟ್ಟಿಲ್ಲ. ನಾನು ಮೆರಿಟ್ ವಿದ್ಯಾರ್ಥಿ. ನಿನ್ನೆ ರಾತ್ರಿ ನನಗೆ ಬಹಳ ಜನ ಅಭಿನಂದಿಸುತ್ತಿದ್ದರು. ಬೆಳಗ್ಗೆ ಆಗುವವರೆಗೆ ಎಲ್ಲವೂ ಬದಲಾಗಿದೆ.
ನನಗೆ ಯಾಕೆ ಸಚಿವ ಸ್ಥಾನ ಕೈತಪ್ಪಿತು ಎಂದು ಪೋಸ್ಟ್ ಮಾಟಂ ಮಾಡುವುದಿಲ್ಲ. ನನಗೆ ಹೆಣ ಕೊಯ್ಯುವುದರಲ್ಲಿ ಆಸಕ್ತಿ ಇಲ್ಲ. ನನಗೆ ನಿನ್ನೆ ದೆಹಲಿಯ ನಾಯಕರು, ಸ್ವಾಮೀಜಿಗಳು ಅಭಿನಂದನೆ ಸಲ್ಲಿಸಿದ್ದರು ಕೊನೆ ಕ್ಷಣದಲ್ಲಿ ನನ್ನ ಹೆಸರು ಡಿಲೀಟ್ ಆಗಿದೆ. ನನ್ನದ್ದು ಮಿಲಿಟರಿ ಜಾತಿ. ನಾನು ಜನಿವಾರ ಮತ್ತೊಂದು ಚಿಂತೆ ಮಾಡುವವನಲ್ಲ. ಎಸ್.ಎ. ರಾಮದಾಸ್ ಹೇಳಿಕೆ.
ನನ್ನ ಅನುಭವದ ಆಧಾರದ ಮೇಲೆ ಕೆ ಆರ್ ಕ್ಷೇತ್ರವನ್ನು ಇಡೀ ದೇಶದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ. ಪೇಜ್ ಪ್ರಮುಖ್ ಯೋಜನೆ ಮೂಲಕ 15 ಸಾವಿರ ಪೇಜ್ ಪ್ರಮುಖರನ್ನು ನೇಮಿಸುತ್ತೇವೆ. ಈ ಮೂಲಕ ರಾಷ್ಟ್ರ ನಾಯಕರನ್ನು ಮೈಸೂರಿಗೆ ಕರೆಸಿ ಕಾರ್ಯಕ್ರಮ ಆಯೋಜನೆ ಮಾಡುತ್ತೇನೆ. ಕ್ಷೇತ್ರದ ಜನರ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡುತ್ತೇನೆ. ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಶಾಸಕ ಎಸ್ ಎ ರಾಮದಾಸ್ ಹೇಳಿಕೆ.
key words: mysore-bjp-ramadas-birth-miss-reaction