ಮೈಸೂರು,ಫೆಬ್ರವರಿ,10,2022(www.justkannada.in): ಪೀಣ್ಯದಿಂದ ವಸ್ತ್ರ ತಂದು ಹಂಚಿದ್ದಾರೆ ಎಂಬ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರ ಆರೋಪಕ್ಕೆ ಬಿಜೆಪಿ ವಕ್ತಾರ ಮೋಹನ್ ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ವಕ್ತಾರ ಎಂ.ಎ.ಮೋಹನ್, ಕಾಂಗ್ರೆಸ್ ನ ವಕ್ತಾರ ಲಕ್ಷ್ಮಣ್ ಅವರು ಅವರ ಅಧ್ಯಕ್ಷರ ವಿರುದ್ಧವೇ ಆರೋಪ ಮಾಡ್ತಿದ್ದಾರೆ. ಸ್ವತಃ ವಸ್ತ್ರ ತಂದು ಹಂಚಿರೋದಾಗಿ ಡಿ.ಕೆ.ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ಸಿದ್ದರಾಮಯ್ಯ ಬೆಂಬಲಿಗರಾಗಿರುವ ಲಕ್ಷ್ಮಣ್ ಆರೋಪ ಮಾಡ್ತಿರೀದು ಡಿ.ಕೆ.ಶಿವಕುಮಾರ್ ವಿರುದ್ಧ. ಪೀಣ್ಯದಿಂದ ವಸ್ತ್ರತಂದು ಬಿಜೆಪಿಯವರು ಹಂಚಿದ್ದಾರೆಂದು ಸುಳ್ಳು ಹೇಳಿದ್ದಾರೆ ಎಂದು ತಿರುಗೇಟು ನೀಡಿದರು.
ಪಂಚರಾಜ್ಯಗಳ ಚುನಾವಣಾ ಪೂರ್ವ ಸಮೀಕ್ಷೆ ಈಗಾಗಲೇ ಹೊರಬಂದಿದ್ದ, ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬುದನ್ನು ಸಮೀಕ್ಷೆಗಳು ಪ್ರಕಟಿಸಿವೆ. ಐದನೇ ರಾಜ್ಯವಾದ ಪಂಜಾಬಿನಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆಂದು ಪ್ರಕಟಿಸಿದೆ. ಹಾಗಾಗಿ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಆರೋಪ ಮಾಡ್ತಿದೆ. ಲಕ್ಷ್ಮಣ್ ಗೆ ಸಂಸದ ಪ್ರತಾಪ್ ಸಿಂಹರವರನ್ನು ಕೆಣಕದಿದ್ದರೆ ಊಟ ಅರಗುವುದಿಲ್ಲ ಎಂದು ಕಾಣುತ್ತಿದೆ.ಟ್ವೀಟ್ ಮಾಡಿದವರಿಗೆ ಡಿಲೀಟ್ ಮಾಡುವ ಹಕ್ಕಿರುತ್ತದೆ. ಇದನ್ನು ಪ್ರಶ್ನಿಸಲು ಇವರಿಗೆ ಯಾವ ಅಧಿಕಾರವಿದೆ.? ಈಗಲೂ ಸಹ ಭಾರತದ ಮುಸಲ್ಮಾನರು ತಮ್ಮ 5-6 ತಲೆಮಾರಿನ ಹಿಂದಿನ ವಂಶವೃಕ್ಷವನ್ನು ತೆಗೆದರೆ ತಮ್ಮ ಮೂಲ ತಿಳಿಯುತ್ತದೆ ಎಂದು ಪ್ರತಾಪ್ ಸಿಂಹರವರು ಹೇಳಿದ್ದಾರೆ. ಬೇಕಾದರೆ ಪರೀಕ್ಷಿಸಲಿ ಎಂದು ಮೋಹನ್ ತಿಳಿಸಿದರು.
ಉಡುಪಿಯಲ್ಲಿ ಪ್ರಾರಂಭವಾದ ಈ ಹಿಜಾಬ್ ವಿವಾದದ ಹಿಂದೆ ಪಿಎಫ್ಐ ಹಾಗೂ ಎಸ್ಡಿಪಿಐ ಕೈವಾಡ ಇದೆ. ಕೆಲ ಸಂಘಟನೆಗಳು ಹಿಂದೆ ನಿಂತು ಕಲ್ಲು ತೂರಾಟ ಮಾಡಿಸಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕು. ಕೆಲ ಪಟ್ಟಬದ್ಧ ಹಿತಾಸಕ್ತಿಗಳು ಮಕ್ಕಳ ಮನಸಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಕೂಡಾ ವಿದ್ಯಾರ್ಥಿಗಳಿಗೆ ಪ್ರಚೋದನೆ ಮಾಡ್ತಿದ್ದಾರೆ. ಈ ಬಗ್ಗೆ ಸರ್ಕಾರ ಕ್ರಮವಹಿಸಬೇಕು. ಸರ್ಕಾರದ ಆದೇಶಗಳ ವಿರುದ್ಧ ನಡೆದುಕೊಳ್ಳುವುದು ಸರಿಯಲ್ಲ. ವಿದ್ಯಾರ್ಥಿಗಳು ಸರ್ಕಾರದ ನಿಯಮ ಪಾಲಿಸಬೇಕು ಎಂದು ಬಿಜೆಪಿ ವಕ್ತಾರ ಎಂ.ಎ.ಮೋಹನ್ ತಿಳಿಸಿದರು.
ವಿವಾದ ಎಬ್ಬಿಸಲು ಕೆಲ ವಿದ್ಯಾರ್ಥಿಗಳಿಗೆ ಟ್ರೇನಿಂಗ್ ನೀಡಲಾಗಿದೆ. ವಿದೇಶದಿಂದ ಹಣ ನೀಡಿ ಗಲಭೆ ಮಾಡಿಸಲಾಗುತ್ತಿದೆ. 10 ದಿನಗಳ ಟ್ರೈನಿಂಗ್ ಪಡೆದು ಉಡುಪಿ ವಿದ್ಯಾರ್ಥಿಗಳು ವಿವಾದ ಎಬ್ಬಿಸಿದ್ದಾರೆ ಎಂದು ಮೋಹನ್ ಆರೋಪ ಮಾಡಿದರು.
Key words: mysore-BJP- spokesperson- MA Mohan