ಮೈಸೂರು, ಮೇ 26, 2021 : (www.justkannada.in news): ದಸರಾ ಸಮಿತಿಗಿಂತ ಕಡೆಯಾಗಿ ಕೋವಿಡ್ ಟಾಸ್ಕ್ ಫೋರ್ಸ್ ರಚಿಸಿ ಅಧಿಕಾರಿಗಳ ನಡುವೆಯೇ ಗೊಂದಲ ಸೃಷ್ಠಿಸಿ ಜಗಳ ತಂದಿಕ್ಕುವ ಕೆಲಸ ಮೈಸೂರಿನಲ್ಲಿ ನಡೆಯುತ್ತಿದೆ ಎಂದು ಸ್ವಪಕ್ಷದ ಮುಖಂಡರ ವಿರುದ್ಧವೇ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಚಾಟಿ ಬೀಸಿದರು.
ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್ ಹೇಳಿದಿಷ್ಟು…
ಮೈಸೂರಿನಲ್ಲಿ ಟಾಸ್ಕ್ಪೋರ್ಸ್ ರಚನೆ ವಿಚಾರ. ಇದಕ್ಕೆ ಯಾವುದೇ ಮಹತ್ವ ಇಲ್ಲ. ದಸರಾ ಸಮಿತಿಯಂತೆ ಟಾಸ್ಕ್ ಪೋರ್ಸ್ ಮಾಡಲಾಗಿದೆ. ಇದರಿಂದ ಗೊಂದಲ ಸೃಷ್ಟಿ ಅಧಿಕಾರಿಗಳ ನಡುವೆ ಜಗಳ ತಂದು ಹಾಕುತ್ತಿದ್ದೀರಾ. ಪಾಲಿಕೆ ಆಯುಕ್ತರ ಹೆಗಲ ಮೇಲೆ ಬಂದೂಕ ಇಟ್ಟು ಡಿಸಿಗೆ ಶೂಟ್..! ಛೀ ನಿಮ್ಮ ನಿಮ್ಮ ತೀಟೆಗೆ ಕೆಲಸ ಮಾಡುತ್ತಿದ್ದೀರಾ ? ಎಂದು ಖಾರವಾಗಿ ಪ್ರಶ್ನಿಸಿದರು.
ಮೈಸೂರಲ್ಲಿ ಜಿಲ್ಲಾಮಂತ್ರಿ ಅಧಿಕಾರ, ಆಡಳಿತವನ್ನೆಲ್ಲಾ ಬೇರೆಯವರ ಕೈಗೆ ನೀಡಿದ್ದಾರೆ, ಅದೇ ರೀತಿ ರಾಜ್ಯದಲ್ಲಿ ಸಿಎಂ ಎಲ್ಲವನ್ನೂ ಬೇರೆಯವರಿಗೆ ಕೊಟ್ಟು ಕುಳಿತಿದ್ದಾರೆ. ಏನು ಸರಿಯಾಗಿ ಸಿಗುತ್ತಿಲ್ಲ. ಸುಮ್ಮನೇ ಟಾಸ್ಕ್ಪೋರ್ಸ್ ಮಾಡಿದ್ದಾರೆ. ರಾತ್ರಿ ಎಂ.ಜಿ ರಸ್ತೆಯಲ್ಲಿ ರೈತರು ನೂರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶಕ್ಕೆ ಕೊರೊನಾ ಹಬ್ಬುತ್ತಿದೆ. ನಗರ ಪೊಲೀಸ್ ಆಯುಕ್ತರು, ಪಾಲಿಕೆ ಆಯುಕ್ತರು ಏನು ಮಾಡುತ್ತಿದ್ದಾರೆ. ಮೈಸೂರಿನಲ್ಲಿ ಎಚ್ ವಿಶ್ವನಾಥ್ ಪ್ರಶ್ನಿಸಿದರು.
key words : mysore-bjp-vishwanath-pressmeet-covid-scandal