ಮೈಸೂರು,ಜನವರಿ,21,2021(www.justkannada.in): ಬ್ರಿಟನ್ನಿಂದ ಬಂದವರಿಗೆ ರೂಪಾಂತರಿ ಕೊರೊನಾ ಧೃಢವಾಗಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಮೈಸೂರು ಡಿಸಿ ರೋಹಿಣಿ ಸಿಂಧೂರಿ, ಇಂದು ಬೆಳಗ್ಗೆ ಸರ್ಕಾರದಿಂದ ಅಧಿಕೃತ ಮಾಹಿತಿ ಬಂದಿದೆ. ರೂಪಾಂತರ ಕೊರೊನಾ ಮೈಸೂರು ಜಿಲ್ಲೆಯಲ್ಲಿ ಯಾರಿಗು ಧೃಢವಾಗಿಲ್ಲ. 137 ಮಂದಿಯ ಕೊರೊನಾ ವರದಿಯಲ್ಲಿ 1 ಕೊರೊನಾ ಪಾಸಿಟಿವ್ ಆಗಿತ್ತು. ಅವರಿಗೂ ರೂಪಾಂತರ ಕೊರೊನಾ ಇಲ್ಲ ಅಂತ ವರದಿ ಬಂದಿದೆ. ಮೈಸೂರು ಜಿಲ್ಲೆಗೆ ಬ್ರಿಟನ್ ವೈರಸ್ ಭಯ ಇಲ್ಲ ಎಂದರು.
ಕರೊನಾ ಲಸಿಕೆ ಅಭಿಯಾನಕ್ಕೆ ಸಿದ್ಧತೆ…
ಕರೋನಾ ಲಸಿಕೆ ಅಭಿಯಾನಕ್ಕೆ ಸಿದ್ಧತೆ ಆಗಿದೆ. ಪ್ರಾರಂಭಿಕ ಹಂತದಲ್ಲಿ ಮೈಸೂರಿನ 32 ಸಾವಿರ ಕರೊನಾ ವಾರಿಯರ್ಗಳಿಗೆ ಲಸಿಕೆ ಹಾಕುತ್ತೇವೆ. ಕೋವಿಡ್ ಲಸಿಕೆ ಅಭಿಯಾನ ಸಂಬಂಧ ಮುಖ್ಯ ಕಾರ್ಯದರ್ಶಿ ಅವರು ವಿಡಿಯೋ ಕಾನ್ಫಿರೆನ್ಸ್ ನಡೆಸಿದ್ದಾರೆ. ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಯಾವ ಲಸಿಕೆ ಕೊಡುತ್ತಾರೆ ಎಂಬುದು ಗೊತ್ತಿಲ್ಲ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಸೇರಿದಂತೆ 162 ಪಾಯಿಂಟ್ ಮಾಡಿಕೊಂಡಿದ್ದೇವೆ. ಪ್ರತಿ ಕೇಂದ್ರದಲ್ಲಿ 5 ವ್ಯಾಕ್ಸಿನೇಟರ್, ಸ್ಟೋರೇಜ್, ಅಗತ್ಯ ಸೌಕರ್ಯ ಎಲ್ಲವನ್ನೂ ರೆಡಿ ಮಾಡಿಕೊಂಡಿದ್ದೇವೆ. ಕೊರೋನಾ ವಾರಿಯರ್ ಗಳಾಗಿ ಕೆಲಸ ಮಾಡಿದ 15 ಸಾವಿರ ಸರ್ಕಾರಿ ಹಾಗೂ 17 ಸಾವಿರ ಖಾಸಗಿ ಸಿಬ್ಬಂದಿ ಇದ್ದಾರೆ. ಮೊದಲ ಹಂತದಲ್ಲಿ ಇರುವರಿಗೆ ಮಾತ್ರ ವ್ಯಾಕ್ಸಿನೇಷನ್ ಮಾಡುತ್ತೇವೆ. 100ಕ್ಕಿಂತ ಹೆಚ್ಚು ಜನ ಇರುವ ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಡಳಿತದ ವತಿಯಿಂದಲೇ ಲಸಿಕೆ ಸರಬರಾಜು ಮಾಡುತ್ತೇವೆ ಎಂದು ಡಿಸಿ ರೋಹಿಣಿ ಸಿಂಧೂರಿ ಅವರು ತಿಳಿಸಿದರು.
ಸಾರ್ವಜನಿಕರಿಗೆ ಸದ್ಯ ಲಸಿಕೆ ಹಾಕುವುದಿಲ್ಲ. ಪ್ರೋಟೊಕಾಲ್ ಪ್ರಕಾರ ಮೊದಲು ಪ್ರೆಂಟ್ ಲೈನ್ ವಾರಿಯರ್ಸ್ ಲಸಿಕೆ ಹಾಕಬೇಕು. ನಂತರ ವಯಸ್ಸಾದವರು. ಇನ್ನೂ ನಾವು ಸಾರ್ವಜನಿಕ ಮಟ್ಟಕ್ಕೆ ಬಂದಿಲ್ಲ. ರಿಜಿಸ್ಟ್ರೇಷನ್ ಬಗ್ಗೆನು ನಮಗೆ ಮಾಹಿತಿ ಬಂದಿಲ್ಲ ಎಂದರು.
Key words: Mysore- Britain- corona virus –DC- Rohini Sindhuri – information.