ಮೈಸೂರು,ಫೆ,7,2020(www.justkannada.in): ನಾನು ಈಗ ಸ್ವತಂತ್ರ. ಹೀಗಾಗಿ ಸಿಎಂ ಬಿಎಸ್ ಯಡಿಯೂರಪ್ಪ ಸರ್ಕಾರಕ್ಕೆ ನನ್ನ ಬೆಂಬಲವಿದೆ ಎಂದು ಬಿಎಸ್ಪಿ ಉಚ್ಚಾಟಿತ ಶಾಸಕ ಎನ್. ಮಹೇಶ್ ಘೋಷಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಬಿಎಸ್ಪಿ ಉಚ್ಛಾಟಿತ ಶಾಸಕ ಎನ್.ಮಹೇಶ್, ಬಿ.ಎಸ್ ಯಡಿಯೂರಪ್ಪ ನನ್ನ ಬೆಂಬಲ ಕೇಳಿದ್ದರು. ಅದ್ದರಿಂದ ಬೆಂಬಲ ಕೊಟ್ಟಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿ ಸಹಾಯ ಮಾಡಿ ಅಂತ ಕೇಳಿದ್ದೇನೆ. ಹಿಂದಿನ ವರ್ಷಗಳಲ್ಲಿ ನನ್ನ ಕ್ಷೇತ್ರಕ್ಕೆ ಅನ್ಯಾಯ ಆಗಿದೆ. ನಿಮ್ಮ ಕಷ್ಟಕ್ಕೆ ನನ್ನನ್ನ ಬಳಸಿಕೊಳ್ಳಿ ಹಾಗೇ ನನ್ನ ಕ್ಷೇತ್ರ ಅಭಿವೃದ್ಧಿ ಮಾಡಿ ಅಂತ ಬಿಎಸ್ವೈ ಬಳಿ ಮನವಿ ಮಾಡಿದ್ದೇನೆ. ಅದನ್ನ ಬಿಟ್ಟು ಇನ್ನೆನನ್ನು ಬಿಜೆಪಿ ಸರ್ಕಾರದಿಂದ ನಿರೀಕ್ಷೆ ಮಾಡಿಲ್ಲ. ಯಡಿಯೂರಪ್ಪ ನನಗೆ ಯಾವುದೇ ರೀತಿಯ ಭರವಸೆ ಕೊಟ್ಟಿಲ್ಲ. ಉಳಿದವರಿಗೆ ಕೊಟ್ಟ 75% ರಷ್ಟು ಭರವಸೆ ಈಡೇರಿಸಿದ್ದಾರೆ ಎಂದು ತಿಳಿಸಿದರು.
ಗೆದ್ದವರನ್ನ ಮತ್ತೆ ಅನರ್ಹರು ಅನ್ನೋದು ಸರಿಯಲ್ಲ-ಸಿದ್ಧರಾಮಯ್ಯ ಹೇಳಿಕೆಗೆ ವಿರೋಧ…
ಇದೇ ವೇಳೆ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಎನ್. ಮಹೇಶ್, ಗೆದ್ದವರನ್ನ ಮತ್ತೆ ಅನರ್ಹರು ಅನ್ನೋದು ಸರಿಯಲ್ಲ. ಸಿದ್ದರಾಮಯ್ಯನವರ ಹೇಳಿಕೆ ಸಮಂಜಸವಲ್ಲ. ಎಲ್ಲರು ಹೇಗೆ ಚುನಾವಣೆ ಮಾಡ್ತಾರೆ ಅನ್ನೋದು ಎಲ್ಲರಿಗು ಗೊತ್ತಿದೆ. ಕೆಲವೊಂದನ್ನ ಮಾಧ್ಯಮದ ಮುಂದೆ ಹೇಳೋದಕ್ಕೆ ಆಗಲ್ಲ. ಅನರ್ಹರೆಲ್ಲರನ್ನ ಸುಪ್ರೀಂಕೋರ್ಟ್ ಚುನಾವಣೆ ಸ್ಪರ್ಧಿಸಿ ಅರ್ಹರಾಗಿ ಅಂತ ಹೇಳಿದೆ. ಹಾಗೇ ಅವರೇಲ್ಲ ಜನತಾ ನ್ಯಾಯಾಲಯದಲ್ಲಿ ನಿಂತು ಆಯ್ಕೆಯಾಗಿ ಬಂದಿದ್ದಾರೆ. ಈಗ ಅವರೇಲ್ಲ ಮಂತ್ರಿಗಳು ಆಗಿದ್ದಾರೆ. ಅವರನ್ನ ಮತ್ತೆ ಅನರ್ಹರು ಅನ್ನೋದು ಸರಿಯಲ್ಲ ಎಂದು ಹರಿಹಾಯ್ದರು.
Key words: Mysore-bsp- MLA-N.Mahesh- announces- support – BS yeddyurappa- government