ಮೈಸೂರು,ಜು,20,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಿನೇ ದಿನೇ ಕೊರೋನಾ ಅಟ್ಟಹಾಸ ಹೆಚ್ಚಾಗಿದ್ದು ಜಿಲ್ಲೆಯ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಈ ನಡುವೆ ಕೊರೋನಾ ಸೋಂಕಿತರ ಜತೆಗೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿದ್ದು ಡೆತ್ ರೇಟ್ ಕಡಿಮೆ ಮಾಡಲು ಮೈಸೂರು ಜಿಲ್ಲಾಡಳಿತ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.
ಮೈಸೂರಿನಲ್ಲಿ ಪ್ರತಿನಿತ್ಯ 100ಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗುತ್ತಿವೆ. ನಿನ್ನೆ ಮೈಸೂರಿನಲ್ಲಿ 100 ಕೊರೋನಾ ಪ್ರಕರಣ ಪತ್ತೆಯಾಗಿತ್ತು. ನೆನ್ನೆ ಒಂದೆ ದಿನ 11 ಮಂದಿ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. ಇದುವರೆಗೆ ಮೈಸೂರಿನಲ್ಲಿ 70 ಕೊರೋನಾ ಸೋಂಕಿತರ ಸಾವನ್ನಪ್ಪಿದ್ದು ಸಾಂಸ್ಕೃತಿಕ ನಗರಿಯಲ್ಲಿ ಕೊರೋನಾ ಮಹಾಮಾರಿ ಕಂಟ್ರೊಲ್ ಮಾಡಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ.
ಕೊರೋನಾ ಪ್ರಕರಣ ಕಡಿಮೆ ಮಾಡಲು ಈಗಾಗಲೇ ಮೈಸೂರಿನಲ್ಲಿ ಸಂಜೆ 6 ರಿಂದ ಬೆಳಿಗ್ಗೆ 5ರವರೆಗೆ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಮಧ್ಯೆ ಭಾನುವಾರವೂ ಲಾಕ್ ಡೌನ್ ಇದ್ದು, ಆದರೂ ದಿನೇ ದಿನೇ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಈ ಹಿನ್ನೆಲೆ ಮೈಸೂರಿನ ಜನತೆಗೆ ಆತಂಕ ಹೆಚ್ಚಾಗಿದೆ.
key words: Mysore- Can’t – Control -corona