ಮೈಸೂರು,ಅಕ್ಟೋಬರ್,29,2024 (www.justkannada.in): ಸಹೋದರ ಸಿಪಿ ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಮೂಲಕ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. 3 ಕ್ಷೇತ್ರದಲ್ಲೂ ಎನ್.ಡಿ.ಎ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ, ರಾಜ್ಯದಲ್ಲಿ ಎನ್.ಡಿ.ಎ ಪರ ಜನರ ಅಲೆ ಇದೆ. ಯೋಗೇಶ್ವರ್ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಚನ್ನಪಟ್ಟಣದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದರು.
ಮುಡಾ ಅಕ್ರಮ ಜನಪ್ರತಿನಿಧಿಗಳು ತಲೆ ತಗ್ಗಿಸುವ ವಿಚಾರ
ಮುಡಾ ಅಕ್ರಮ ಕುರಿತು ಪ್ರತಿಕ್ರಿಯಿಸಿದ ವಿ.ಸೋಮಣ್ಣ, ಇದು ಜನಪ್ರತಿನಿಧಿಗಳು ತಲೆ ತಗ್ಗಿಸುವ ವಿಚಾರ. ಮುಡಾದಲ್ಲಿ ಇಸ್ಟೊಂದು ಅಕ್ರಮ ಆಗಿದೆ ಅಂದುಕೊಂಡಿರಲಿಲ್ಲ. ನಾನು ಈ ಹಿಂದೆ ಮೈಸೂರು ಜಿಲ್ಲಾ ಮಂತ್ರಿಯಾಗಿದ್ದೆ. ಆಗ ನಾನು ಪ್ರತಾಪ್ ಸಿಂಹ ಎಲ್ಲರೂ ಕೂಡ ಮುಡಾದ ಸೈಟುಗಳ ಬಗ್ಗೆ ಮಾಹಿತಿ ಪಡೆದಿದ್ದೆ. 7200 ಸೈಟುಗಳನ್ನು ಪತ್ತೆ ಹಚ್ಚಿ ಹರಾಜು ಹಾಕಲು ತೀರ್ಮಾನ ಮಾಡಿದ್ದವು. ಈ ಹಿಂದೆ ಮೈಸೂರು ಡಿಸಿಯಾಗಿದ್ದ ಅಭಿರಾಮ್ ಜಿ ಶಂಕರ್, ಮುಡಾ ಆಯುಕ್ತರಾದ ಕಾಂತರಾಜ್ ಎಲ್ಲರೂ ಜನರ ಪರ ಕೆಲಸ ಮಾಡಲು ನಿರ್ಧಾರ ಮಾಡಿದ್ದವು. ಆದರೆ ಅದು ಆಗಲಿಲ್ಲ. ಈಗ ತನಿಖೆಗಳು ನಡೆಯುತ್ತಿದೆ. ಅಕ್ರಮ ಹೊರ ಬರಲಿ ಎಂದರು.
ಯಡಿಯೂರಪ್ಪ ಪತ್ನಿ ಸಾವು ಪ್ರಕರಣ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಸಚಿವ ಭೈರತಿ ಸುರೇಶ್ ಆರೋಪ ವಿಚಾರದ ಬಗ್ಗೆ ಕಿಡಿಕಾರಿದ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಪುಟವಿಟ್ಟ ಚಿನ್ನ. ಆಕೆ ಬಗ್ಗೆ ಇಲ್ಲ ಸಲ್ಲದ ಆರೋಪ ಸರಿಯಲ್ಲ. ಎಲ್ಲರೂ ಮಂತ್ರಿಯಾಗಲೂ ಸಾಧ್ಯವಿಲ್ಲ ಸುರೇಶ್ ತಮ್ಮ ಸ್ಥಾನದ ಜವಾಬ್ದಾರಿ ಅರಿತು ಮಾತನಾಡಲಿ ಎಂದು ವಾಗ್ದಾಳಿ ನಡೆಸಿದರು.
Key words: mysore, Central Minister, V.Somanna, by-election