ಬೆಂಗಳೂರು,ಆಗಸ್ಟ್,3,2024 (www.justkannada.in): ಕಾಂಗ್ರೆಸ್ ಸರ್ಕಾರದಲ್ಲಿ ಹತ್ತಾರು ಹಗರಣಗಳು ನಡೆದಿವೆ. ಅಹಿಂದ ಹೆಸರಲ್ಲಿ ಲೂಟಿ ಮಾಡುತ್ತಿದ್ದಾರೆ. ಹೀಗಾಗಿ ಜನರನ್ನ ಎಚ್ಚರಿಸಲು ಪಾದಯಾತ್ರೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.
ಮುಡಾ ಹಗರಣದ ವಿರುದ್ದ ಇಂದಿನಿಂದ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ಜೆಡಿಎಸ್ ಜಂಟಿ ಪಾದಯಾತ್ರೆ ಹಮ್ಮಿಕೊಂಡಿದ್ದು ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಸರ್ಕಾರದಲ್ಲಿ ಹಲವು ಜನವಿರೋಧಿ ನೀತಿಗಳಿವೆ. ಕಾಂಗ್ರೆಸ್ ಹತ್ತರು ಹಗರಣದಲ್ಲಿ ಭಾಗಿಯಾಗಿದೆ. ಮಂತ್ರಿಗಳೇ ಹಗರಣದ ಪಾಲುದಾರರಾಗಿದ್ದಾರೆ. ಹೀಗಾಗಿ ಜನರನ್ನ ಎಚ್ಚರಿಸಲು ಪಾದಯಾತ್ರೆ ಮಾಡುತ್ತಿದ್ದೇವೆ ಎಂದರು.
ಕಾಂಗ್ರೆಸ್ ನಿಂದ ಜನಾಂದೋಲನ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ರಾಮನಗರದಲ್ಲೇ ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ರಾಜಕೀಯದ ಹೊಟ್ಟುಉರಿಗೆ ಔಷಧಿ ಇಲ್ಲ. ಅಹಿಂದ ಹೆಸರಲ್ಲಿ ಎಸ್ ಸಿ, ಎಸ್ ಟಿ ಸಮಾಜದ ಹಣ ಲೂಟಿ ಮಾಡಿದ್ದಾರೆ. ಲೂಟಿಕೋರರು ಅಹಿಂದ ಸಮಾಜದ ರಕ್ಷಕರಾ? ಎಂದು ವಾಗ್ದಾಳಿ ನಡೆಸಿದರು.
Key words: mysore chalo, bjp-jds, central minister, HDK