ಮೈಸೂರು,ಅ,22,2019(www.justkannada.in): ಕೇಂದ್ರ ಸರ್ಕಾರ ರಾಜ್ಯಸರ್ಕಾರಕ್ಕೆ ಕೂಡಲೇ ಎರಡನೇ ಹಂತದ ಪರಿಹಾರ ನೀಡಲಿದೆ. ಕೇಂದ್ರ ಸಚಿವರು ಸಂಸದರು ಹಾಗೂ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಒತ್ತಡ ತಂದು ಎರಡನೇ ಹಂತದ ಹಣ ಬಿಡುಗಡೆಗೊಳಿಸಲಿದ್ದೇವೆ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಸಂಸದ ವಿ. ಶ್ರೀನಿವಾಸ್ ಪ್ರಸಾದ್, ಈಗಾಗಲೇ ಕೇಂದ್ರವು ಮೊದಲ ಹಂತದಲ್ಲೇ 1200 ಕೋಟಿ ರೂ ಹಣ ಬಿಡುಗಡೆ ಮಾಡಿದೆ. ಆ ಹಣವನ್ನ ರಾಜ್ಯ ಸರ್ಕಾರದಿಂದ ನಿರಾಶ್ರಿತರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ನೆರೆಪರಿಹಾರ ವಿಚಾರದಲ್ಲಿ ರಾಜ್ಯದ ವಿರೋಧಪಕ್ಷದವರು ವಿನಕಾರಣ ಟೀಕೆ ಮಾಡುತ್ತಿದ್ದಾರೆ, ರಾಜ್ಯ ಸರ್ಕಾರ ಸಂಪನ್ಮೂಲ ಕ್ರೂಢಿಕರಿಸಿ ಕೇಂದ್ರ ನೀಡಿದ ಪರಿಹಾರದ ಜೊತೆ ಹೆಚ್ಚಿನ ಹಣವನ್ನು ಪಾರದರ್ಶಕವಾಗಿ ನಿರಾಶ್ರಿತರಿಗೆ ತಲುಪಿಸುವ ಕೆಲಸವಾಗುತ್ತಿದೆ. ನಿರಾಶ್ರಿತರು ಆತಂಕಪಡುವ ಪ್ರಮೇಯವಿಲ್ಲ, ತಾತ್ಕಾಲಿಕ ತೊಂದರೆ ಇದ್ದರೂ ಶಾಶ್ವತವಾಗಿ ಸಮಸ್ಯೆಗಳನ್ನು ಪರಿಹರಿಸಲಿದ್ದೇವೆ ಎಂದು ಭರವಸೆ ನೀಡಿದರು.
ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ನನ್ನದೇನು ಪಾತ್ರವಿಲ್ಲ …
ಹುಣಸೂರು ಉಪ ಚುನಾವಣಾ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ವಿ. ಶ್ರಿನಿವಾಸ್ ಪ್ರಸಾದ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ನನ್ನದೇನು ಪಾತ್ರವಿಲ್ಲ. ರಾಜ್ಯದ ನಾಯಕರು ಹಾಗೂ ಸ್ಥಳೀಯ ನಾಯಕರು ಅಭ್ಯರ್ಥಿ ಯಾರೆಂದು ನಿರ್ಧರಿಸಲಿದ್ದಾರೆ. ಈ ವಿಚಾರದಲ್ಲಿ ನನ್ನದೇನು ಪಾತ್ರವಿಲ್ಲ. ಆದರೆ ಚುನಾವಣಾ ಪ್ರಚಾರದಲ್ಲಿ ಮಾತ್ರ ಸಕ್ರಿಯವಾಗಿ ಪಾಲ್ಗೊಂಡು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇನೆ ಎಂದು ನುಡಿದರು.
ಮಹಾರಾಷ್ಟ್ರ ಹಾಗೂ ಹರಿಯಾಣ ಚುನಾವಣೆಯ ಸಮೀಕ್ಷೆ ವಿಚಾರ ಕುರಿತು ಮಾತನಾಡಿದ ಸಂಸದ ವಿ. ಶ್ರೀನಿವಾಸ್ ಪ್ರಸಾದ್, ಮಹಾರಾಷ್ಟ್ರ ಹಾಗೂ ಹರಿಯಾಣ ಸೇರಿದಂತೆ ದೇಶದಲ್ಲಿ ನಡೆಯುವ ಎಲ್ಲ ಉಪ ಚುನಾವಣೆಗಳಲ್ಲೂ ಬಿಜೆಪಿ ಭರ್ಜರಿ ಗೆಲುವು ದಾಖಲಿಸಲಿದೆ ಎಂದು ಎಲ್ಲಾ ಸಮೀಕ್ಷೆಗಳು ತಿಳಿಸಿವೆ, ಈ ಫಲಿತಾಂಶದಿಂದ ಬಿಜೆಪಿ ದೇಶದಲ್ಲಿ ಮತ್ತಷ್ಟು ಗಟ್ಟಿಗೊಳ್ಳಲಿದೆ. ಈ ಫಲಿತಾಂಶವು ದೇಶದ ಜನರ ಭಾವನೆಯಲ್ಲಿ ಬಿಜೆಪಿ ಇರುವ ಸ್ಪಷ್ಟಪಡಿಸುತ್ತಿದೆ ಎಂದರು.
Key words: mysore- Chamarajanagar MP- Shrinivas Prasad-flood relief-hunsur- by-election