ಮೈಸೂರು,ನವೆಂಬರ್,11,2020(www.justkannada.in): ರಾಜ್ಯದಲ್ಲಿ ಕೊರೋನಾ ಮಹಾಮಾರಿ ಇತ್ತೀಚೆಗೆ ಕಡಿಮೆಯಾಗುತ್ತಿದ್ದು, ಕೊರೊನಾ ಸಂಕಷ್ಟದ ನಡುವೆಯೂ ಮೈಸೂರಿನ ಚಾಮುಂಡಿ ಬೆಟ್ಟದ ಹುಂಡಿಯಲ್ಲಿ ಭರ್ಜರಿ ಕಾಣಿಕೆ ಸಂಗ್ರಹವಾಗಿದೆ.
ಅಕ್ಟೋಬರ್ ತಿಂಗಳ ಹುಂಡಿ ಹಣ ಎಣಿಕೆ ನಡೆದಿದ್ದು, ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ 65 ಲಕ್ಷದ 61 ಸಾವಿರದ 229 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ಈ ಕುರಿತು ಮುಜರಾಯಿ ತಹಶಿಲ್ದಾರ್ ಚಾಮುಂಡೇಶ್ವರಿ ದೇವಸ್ಥಾನದ ಇಓ ಯತಿರಾಜ್ ಮಾಹಿತಿ ನೀಡಿದ್ದಾರೆ.
2000 ಸಾವಿರ ಮುಖ ಬೆಲೆಯ 98 ನೋಟು, 500 ಮುಖಬೆಲೆಯ 4932 ನೋಟು, 29 ಸಾವಿರ ರೂ. ನಷ್ಟು 1 ರೂಪಾಯಿ ನಾಣ್ಯ, 17 ಸಾವಿರ ರೂ. ನಷ್ಟು 2 ರೂಪಾಯಿ ನಾಣ್ಯ ಸಂಗ್ರಹವಾಗಿದೆ. ತಾಯಿ ಚಾಮುಂಡೇಶ್ವರಿ ದೇಗುಲದ ಹುಂಡಿಯಲ್ಲಿ ಈ ಬಾರಿಯೂ ಬ್ಯಾನ್ ಆದ ನೋಟುಗಳು ಪತ್ತೆಯಾಗಿವೆ. ಬ್ಯಾನ್ ಆದ 500 ಹಾಗೂ 1000 ಮುಖಬೆಲೆಯ ಅಮಾನ್ಯಗೊಂಡಿರುವ ನೋಟುಗಳು ಪತ್ತೆಯಾಗಿದೆ.
English summary…
Huge collection in Chamundi temple hundi
Mysuru, Nov. 11, 2020 (wwwjustkannada.in): According to information provided by Sri Yathiraj, EO, Chamundeshwari Temple and Muzrai Tahasildar a sum of Rs. 65,61,229/- has been collected in the hundi in the Chamundeshwari temple atop Chamundi Hills in the month of October 2020. Devotees have donated generously even amidst corona and lockdown.
Keywords: Chamundi hill-Hundi collection
Key words: Mysore- Chamundi hill – Hundi –money- Collection