ಮೈಸೂರು,ಜೂ,26,2020(www.justkannada.in): ಆಷಾಢ ಮಾಸ ಬಂತೆಂದರೇ ಸಾಕು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಬ್ಬದ ವಾತಾವರಣ. ಅದರಲ್ಲೂ ಚಾಮುಂಡಿ ಬೆಟ್ಟದಲ್ಲಿ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಿದ್ದರಿಂದ ಸಂಭ್ರಮವೋ ಸಂಭ್ರಮ. ಈ ವೇಳೆ ಚಾಮುಂಡಿ ಬೆಟ್ಟ ಭಕ್ತರಿಂದ ಗಿಜುಗುಡುತ್ತಿತ್ತು. ಆದರೆ ಈ ಬಾರಿ ಇದಕ್ಕೆಲ್ಲಾ ಬ್ರೇಕ್ ಬಿದ್ದಿದೆ. ಕಾರಣ ಕೊರೋನಾ ಆತಂಕ.
ಹೌದು ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಹೆಚ್ಚಾಗುತ್ತಿದ್ದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಹೀಗಾಗಿ , ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕ ಪ್ರವೇಶ ನಿಷೇಧ ಹೇರಲಾಗಿದೆ. ಆದರಿಂದ ಚಾಮುಂಡಿ ಬೆಟ್ಟದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಪ್ರತಿವರ್ಷ ನಡೆಯುತ್ತಿದ್ದ ಬೆಟ್ಟದಲ್ಲಿ ವಿಶೇಷ ಅಲಂಕಾರ ರದ್ದು ಮಾಡಲಾಗಿದ್ದು 7.30ರವರೆಗೂ ಧಾರ್ಮಿಕ ವಿಧಿವಿಧಾನ ಮುಗಿಸಿ ದೇಗುಲಕ್ಕೆ ಬೀಗ ಹಾಕಲಾಗಿದೆ
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಭಕ್ತರ ವಿಶೇಷ ಪೂಜಾ ವ್ಯವಸ್ಥೆಗೂ ಬ್ರೇಕ್ ಬಿದ್ದಿದ್ದು ಮೊದಲ ಶುಕ್ರವಾರ ಚಾಮುಂಡಿ ಬೆಟ್ಟದಲ್ಲಿ ಭಕ್ತರಿಲ್ಲದೆ ಬಣಗುಡುತ್ತಿರುವ ಪರಿಸ್ಥಿತಿ ಕಂಡು ಬಂದಿದೆ. ಇನ್ನು ಕೊರೋನಾ ಹಿನ್ನೆಲೆ ಪ್ರಸಾದ ವಿತರಣೆಗೂ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಪ್ರತಿವರ್ಷ ಆಷಾಢ ಮಾಸದಲ್ಲಿ ಚಾಮುಂಡಿ ಬೆಟ್ಟದಲ್ಲಿ ಸಾವಿರಾರು ಮಂದಿಗೆ ಪ್ರಸಾದ ವಿತರಣೆ ಮಾಡಲಾಗುತ್ತಿತ್ತು. ಸಾವಿರಾರು ಭಕ್ತರಿಂದ ತುಂಬಿ ತುಳುಕುತ್ತಿದ್ದರು. ಆದರೆ ಕೊರೋನಾ ಆತಂಕದಲ್ಲಿ ಚಾಮುಂಡಿ ಬೆಟ್ಟ ಸಂಪೂರ್ಣ ಖಾಲಿ ಖಾಲಿಯಾಗಿದೆ.
ಈ ಕುರಿತು ಮಾತನಾಡಿರುವ ಡಿಸಿಪಿ ಡಾ.ಎ.ಎನ್.ಪ್ರಕಾಶ್ಗೌಡ, ಸಾರ್ವಜನಿಕರ ನಿರ್ಬಂಧಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪ್ರತಿ ವರ್ಷ ಸಾವಿರಾರು ಜನ ಬಂದು ಹೋಗುತ್ತಿದ್ದರು. ಜನರನ್ನು ನಿಯಂತ್ರಣ ಮಾಡುವುದೇ ಸವಾಲಿನ ಕೆಲಸವಾಗುತ್ತಿತ್ತು. ಈ ಬಾರಿ ಕೊರೊನಾ ಕಾರಣಕ್ಕೆ ಸಾರ್ವಜನಿಕರ ದರ್ಶನ ನಿರ್ಬಂಧಿಸಲಾಗಿದೆ. ನಾಲ್ಕು ಗೇಟ್ಗಳನ್ನು ಬಂದ್ ಮಾಡಿದ್ದೇವೆ. ಮುಖ್ಯದ್ವಾರದ ಬಳಿಯೂ ಜನ ಇಲ್ಲ. ಜನರಿಂದ ನಮಗೆ ಉತ್ತಮ ಸಹಕಾರ ದೊರಕಿದೆ ಎಂದು ತಿಳಿಸಿದ್ದಾರೆ.
Key words: mysore- chamundi hills-devotees- Restriction.