ಮೈಸೂರು,ಡಿ,24,2019(www.justkannada.in): ಚಾಮುಂಡಿ ಬೆಟ್ಟದಲ್ಲಿ ಮಳಿಗೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದ್ದೇವೆ. ಶೀಘ್ರದಲ್ಲೇ ವ್ಯಾಪಾರಸ್ತರಿಗೆ ಮಳಿಗೆ ನೀಡುತ್ತೇವೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಚಾಮುಂಡಿ ಬೆಟ್ಟದ ವಾಣಿಜ್ಯ ಮಳಿಗೆಗಳಿಗೆ ಸಚಿವ.ವಿ. ಸೋಮಣ್ಣ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಇನ್ನು ಒಂದೂವರೆ ತಿಂಗಳಲ್ಲಿ ಕಾಮಗಾರಿ ಮುಕ್ತಾಯ ವಾಗಲಿದೆ. ಬಳಿಕ ಸರಿಯಾದ ಫಲಾನುಭವಿಗಳಿಗೆ ಮಳಿಗೆ ನೀಡಲಾಗುವುದು ಎಂದರು.
ರಾಜ್ಯದಲ್ಲಿ ವಸತಿ ಯೋಜನೆಯಲ್ಲಿ ಗೋಲ್ಮಾಲ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ವಿ.ಸೋಮಣ್ಣ, ಈಗಾಗಲೇ 7ಲಕ್ಷ ಮನೆಯನ್ನ ವಾಪಾಸ್ ಪಡೆದಿದ್ದೇವೆ. ಇದರಲ್ಲಿ ಸಾಕಷ್ಟು ಅರ್ಹ ಫಲಾನುಭವಿಗಳಿಗೆ ಮನೆಗಳು ಸಿಕ್ಕಿಲ್ಲ. ನಮ್ಮ ಹಾಗೂ ಹಿಂದಿನ ಸರ್ಕಾರ ಕೊಟ್ಟ ಮನೆಗಳನ್ನ ಪರಿಶೀಲನೆ ನಡೆಯುತ್ತಿದೆ. ಅದರಲ್ಲಿ ಸಾಕಷ್ಟು ಮನೆಗಳು ಅರೆಬರೆ ಕೆಲಸ ಆಗಿವೆ. ಆ ಕಾಮಗಾರಿ ಶೀಘ್ರವಾಗಿ ಮುಗಿಸಿ ಅರ್ಹರಿಗೆ ನೀಡುವುದು ನಮ್ಮ ಗುರಿ ಎಂದರು.
ಹಾಗೆಯೇ ಗ್ರಾಮಸಭೆಯಲ್ಲಿ ಮನೆ ನೀಡುವಿಕೆ ತೀರ್ಮಾನ ಮಾಡಿದ್ರು ರದ್ದಾಗುವುದು. ಇನ್ಮುಂದೆ ಶಾಸಕರು ಕೂಡ ಸರಿಯಾಗಿ ಪರಿಶೀಲನೆ ನಡೆಸಬೇಕು. ಅರ್ಹ ಫಲಾನುಭವಿಗಳಿಗೆ ಮನೆ ನೀಡಲು ಖುದ್ದಾಗಿ ಪರಿಶೀಲನೆ ನಡೆಸಬೇಕು. ಮೊದಲಿನ ಹಾಗೆ ನೋಡದೆ ಸೈನ್ ಮಾಡಿ ಮನೆ ಕೊಡುವ ಆಗಿಲ್ಲ. ಇದೀಗಾ ನಾವು ಸಿದ್ದಪಡಿಸಿದ ಮನೆಗಳಲ್ಲು 7 ಸಾವಿರದಷ್ಟು ಬೇರೆ ಅವ್ರು ಇದ್ದಾರೆ. ಅದು ಕೂಡ ನಮ್ಮ ಗಮನಕ್ಕೆ ಬಂದಿದ್ದು ಅದನ್ನ ಕ್ಯಾನ್ಸಲ್ ಮಾಡಿದ್ದೇವೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ವಿಚಾರ ಕುರಿತು ಮಾತನಾಡಿದ ಸಚಿವ ಸೋಮಣ್ಣ, ಈಗಾಗಲೇ ಆ ಯೋಜನೆಯನ್ನ ಕೆಲವೆಡೆ ನೋಡಿದ್ದೇವೆ. ರೋಪ್ ವೇ ಮಾಡೋ ವಿಚಾರವಾಗಿ ಸಾಕಷ್ಟು ಚರ್ಚೆ ಆಗ್ತಿವೆ. ಅದರ ಸಾಧಕ ಬಾದಕ ತಿಳಿಯೋಕೆ ಬಿಟ್ಟಿದ್ದೇವೆ. ಅದು ಸರಿಯಾ.? ಇಲ್ಲವೇ ಎಂಬುದಷ್ಟೇ ಚರ್ಚೆಯಾಗಬೇಕು. ಅದಕ್ಕಾಗಿ ಚರ್ಚೆಯಾಗಲಿ ನಂತರ ಆ ಬಗ್ಗೆ ನೋಡೋಣ ಎಂದರು.
ಪೇಜಾವರ ಶ್ರೀಗಳು ಚೇತರಿಕೆ ಕಾಣುತ್ತಿದ್ದಾರೆ. ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಲಕ್ಷಾಂತರ ಭಕ್ತರನ್ನ ಶ್ರೀಗಳು ಹೊಂದಿದ್ದಾರೆ. ಎಲ್ಲರು ಅವರ ಗುಣಮುಖರಾಗಲು ಪ್ರಾರ್ಥನೆ ಮಾಡ್ತಿದ್ದಾರೆ. ಹಾಗಾಗಿ ಅವರು ಶೀಘ್ರವಾಗಿ ಗುಣಮುಖರಾಗ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Key words: mysore –chamundi hills-Minister-v. Somanna- worshiped