ಮೈಸೂರು,ಸೆ,27,2019(www.justkannada.in): ಮಹಿಷಾದಸರಾ ಆಚರಣೆಗಾಗಿ ಚಾಮುಂಡಿಬೆಟ್ಟದ ಮಹಿಷಾಸುರ ಪ್ರತಿಮೆ ಬಳಿ ಶಾಮಿಯಾನ ಹಾಕಿದ್ದಕ್ಕೆ ಗರಂ ಆದ ಸಂಸದ ಪ್ರತಾಪ್ ಸಿಂಹ ಪೊಲೀಸರ ವಿರುದ್ದ ತಮ್ಮ ಪ್ರಲಾಪ ತೋರಿಸಿದ್ದಾರೆ.
ಚಾಮುಂಡೇಶ್ವರಿ ಬೆಟ್ಟದ ಮಹಿಷಾಸುರ ದಸರಾ ಆಚರಣೆ ಹಿನ್ನೆಲೆ, ಮಹಿಷಾಸುರ ಮೂರ್ತಿ ಬಳಿ ಶಾಮಿಯಾನ ಹಾಕಿದ್ದಕ್ಕೆ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಕಮಿಷನರ್ ಹಾಗೂ ಡಿಸಿಪಿ ವಿರುದ್ಧ ಕೂಗಾಡಿ ಬೊಬ್ಬೆ ಹಾಕಿದ ಸಂಸದ ಪ್ರತಾಪ್ ಸಿಂಹ, ಪೊಲೀಸರೆ ನಿಮ್ಮಿಂದ ಇಂತಹ ಷಂಡತನ ನಿರೀಕ್ಷೆ ಮಾಡಿರಲಿಲ್ಲ ಎಂದು ಹರಿಹಾಯ್ದರು
ಅನುಮತಿಯಿಲ್ಲದೆ ಶಾಮಿಯಾನ ಹಾಕಲಾಗಿದೆ. ನಿಮಗೆ ಇಲ್ಲಿ ಶಾಮಿಯಾನ ಹಾಕಲು ಯಾರು ಅನುಮತಿ ಕೊಟ್ಟಿದ್ದು ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹಗೆ ಉತ್ತರ ಕೊಟ್ಟ ಪೊಲೀಸ್ ಆಯುಕ್ತರು ನಮಗೂ ಇದಕ್ಕೂ ಸಂಬಂಧವಿಲ್ಲ ಇದು ಗ್ರಾಮಪಂಚಾಯಿತಿವರ ವ್ಯಾಪ್ತಿ ಎಂದು ಹೇಳಿದರು.
ಹಾಗೆಯೇ ಗ್ರಾಮಪಂಚಾಯಿತಿ ಸಿಬ್ಬಂದಿಯೂ ಸಹ ನಾವು ಅನುಮತಿ ಕೊಟ್ಟಲ್ಲವೆನ್ನುತ್ತಿದ್ದು, ಹೀಗಾಗಿ ಕೂಡಲೇ ಟ್ರಕ್ ತಂದು ವೇದಿಕೆ ತೆರುವುಗೊಳಿಸಬೇಕು ಇಲ್ಲವಾದರೆ ಅರಮನೆ ಆವರಣದಿಂದ ನಿನ್ನ ಓಡಿಸ್ತಿನೆಂದು ಶಾಮಿಯಾನ ಮಾಲೀಕರಿಗೆ ಸಂಸದ ಪ್ರತಾಪ್ ಸಿಂಹ ಅವಾಜ್ ಹಾಕಿದ್ದಾರೆ. ಬಳಿಕ ಬೆಟ್ಟದ ಮೇಲೆ ಹಾಕಲಾಗಿದ್ದ ವೇದಿಕೆಯನ್ನು ತೆರವು ಮಾಡಿಸಿದ್ದಾರೆ.
Key words: mysore -chamundi hills-MP-Prathap simha- against – police-mahisha dasara