ಮೈಸೂರು,ಅ,17,2019(www.justkannada.in): ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮಾಜಿ ಸಚಿವ ಸಾ.ರಾ ಮಹೇಶ್ ಮತ್ತು ಹೆಚ್.ವಿಶ್ವನಾಥ್ ನಡುವಿನ ಆಣೆ ಪ್ರಮಾಣದ ಹೈಡ್ರಾಮ ನಡೆದಿದ್ದು, ಇಬ್ಬರು ನಾಯಕರ ಪ್ರತಿಷ್ಟೆಗೆ ಭಕ್ತರು ಹೈರಣಾದರು.
ಆಣೆ ಪ್ರಮಾಣಕ್ಕೆ ಪಂಥಾಹ್ವಾನ ನೀಡಿದ್ದ ಉಭಯ ನಾಯಕರು ಇಂದು ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದರು. ಆದರೆ ತನ್ನನ್ನ ಕೊಂಡುಕೊಂಡವರ ಜತೆ ಸಾ.ರಾ ಮಹೇಶ್ ತಾನಿದ್ದಲ್ಲಿಗೆ ಬರಲಿ ಎಂದು ಹೆಚ್.ವಿಶ್ವನಾಥ್ ದೇವಸ್ಥಾನದ ಹೊರಗಡೆ ಕಾಯುತ್ತಿದ್ದರೆ, ಇತ್ತ ದೇವಸ್ತಾನದ ಒಳಗೆ ಬಂದು ಹೆಚ್.ವಿಶ್ವನಾಥ್ ಪ್ರಮಾಣ ಮಾಡಲಿ ಎಂದು ದೇವಸ್ಥಾನದ ಒಳಾಂಗಣದಲ್ಲಿ ಸಾ.ರಾ ಮಹೇಶ್ ಕಾದು ಕುಳಿತಿದ್ದರು.
ಇಬ್ಬರು ನಾಯಕರ ಪ್ರತಿಷ್ಟಿಗೆ ಭಕ್ತರು ಪರದಾಟ ನಡೆಸಿದ ಸ್ಥಿತಿ ನಿರ್ಮಾಣವಾಗಿತ್ತು. ಚಾಮುಂಡಿ ಬೆಟ್ಟದಲ್ಲಿ ದೇವರ ದರ್ಶನ ಪಡೆದ ಬಳಿಕ ಮಾತನಾಡಿದ ಹೆಚ್. ವಿಶ್ವನಾಥ್, ನೀನೊಬ್ಬ ಹೇಡಿ. ನೀನು ಪಲಾಯನ ಮಾಡಿದ್ದೀಯಾ. ನಿನ್ನ ಪಲಾಯನವಾದಕ್ಕೆ ದಿಕ್ಕಾರ. ಆತ ಪ್ರಮಾಣ ಮಾಡಿದ್ರೆ ಅದು ಸುಳ್ಳು ಎಂದು ಸಾ.ರಾ ಮಹೇಶ್ ವಿರುದ್ದ ಕಿಡಿಕಾರಿದರು.
ಸಾರಾ ಮಹೇಶ್ ಹೇಳಿದ್ದಾರೆ ನಾನು 25 ಕೋಟಿ ರೂಗಳಿಗೆ ಮಾರಿಕೊಂಡಿದ್ದಾರೆ ಎಂದು. ಆಗಾಗಿ ನನ್ನನ್ನು ಕೊಂಡು ಕೊಂಡವನನ್ನು ಭೇಟಿಯಾಗಲು ಬಂದಿದ್ದೇನೆ. ಯಾವುದೇ ಆಣೆ ಪ್ರಮಾಣ ಮಾಡಲು ಅಲ್ಲ. ನಾನು ಎಲ್ಲಿಯೂ ಆಣೆ ಪ್ರಮಾಣ ಮಾಡುತ್ತೆನೆ ಎಂದು ಹೇಳಿಯೇ ಇಲ್ಲ. ಸಾರಾ ಮಹೇಶ್ ಒಬ್ಬರೇ ಬಂದರೇ ಅವರು ಮಾಡಿರುವ ಆರೋಪ ಸುಳ್ಲು ಎಂದಾಗುತ್ತೆ. ನಾನು ರಾಜಕೀಯ ಕ್ಷೇತ್ರದಲ್ಲಿ ಹಿರಿಯ ಬಹಳಷ್ಟು ದುಡಿದ್ದಿದ್ದೆನೆ..ಹೀಗಾಗಿ ನಾನು ಇಬ್ಬರು ವ್ಯಕ್ತಿಗಳನ್ನು ಭೇಟಿಯಾಗಲು ಬಂದಿದ್ದೆನೆ ಎಂದರು.
ಮತ್ತೆ ಸಾ.ರಾ ಮಹೇಶ್ ವಿರುದ್ದ ವಾಗ್ಬಾಣ ಮುಂದುವರೆಸಿದ ಹೆಚ್.ವಿಶ್ವನಾಥ್, ಹೇ ಮಹೇಶ್ ನೀನೆನು ಟಾಟ ಬಿರ್ಲಾನಾ.
ನಾನೇ ಚುನಾವಣೆಗೆ ನಿಲ್ಲೋದು. ನನ್ನನ್ನು ಕೊಂಡುಕೊಂಡವನು ಕರೆದುಕೊಂಡು ಬಂದು ಪ್ರಮಾಣ ಮಾಡಲಿ. ನಿನ್ಯಾಕೆ ಒಳಗೆ ಕುಳಿತಿದ್ದೀಯಾ. ನೀನೊಬ್ಬ ಹೇಡಿ. ನೀನು ಪಲಾಯನ ಮಾಡಿದ್ದೀಯಾ. ನಿನ್ನ ಪಲಾಯನವಾದಕ್ಕೆ ಧಿಕ್ಕಾರ ಎಂದು ಹರಿಹಾಯ್ದರು.
ಆತ ಪ್ರಮಾಣ ಮಾಡಿದ್ರೆ ಅದು ಸುಳ್ಳು. ನೀನು ಕೊಂಡುಕೊಂಡವನನ್ನು ಕರೆದುಕೊಂಡು ಬಂದ್ರೆ ಸಂಜೆವರೆಗೆ ಕಾಯುತ್ತೇನೆ. ನಾನು ಮಾರಿಕೊಂಡಿದ್ದೇನೆ ಅಂತ ಮಕ್ಕಳ ಮೇಲೆ ಆಣೆ ಮಾಡಿದ್ದಾನೆ. ಇವಾಗ್ಯಾಕೆ ಒಳಗೆ ಕುಳಿತಿದ್ದಾನೆ ಎಂದು ಹೆಚ್.ವಿಶ್ವನಾಥ್ ಪ್ರಶ್ನಿಸಿದರು.
Key words: mysore- chamundi hills-sa.ra Mahesh-h.vishwanath