ಮೈಸೂರು,ಡಿಸೆಂಬರ್,18,2020(www.justkannada.in): ಕೊರೋನಾ ಸಂಕಷ್ಟದ ನಡುವೆ ಮೈಸೂರಿನ ತಾಯಿ ಚಾಮುಂಡೇಶ್ವರಿ ದೇಗುಲದ ಹುಂಡಿಗೆ ಕೋಟಿ ಆದಾಯ ಬಂದಿದೆ.
ಹೌದು, ಮೈಸೂರು ಚಾಮುಂಡಿ ಬೆಟ್ಟದ ನವೆಂಬರ್ ತಿಂಗಳ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ತಾಯಿ ಚಾಮುಂಡೇಶ್ವರಿ ಹುಂಡಿಗೆ ಭಕ್ತರಿಂದ ಕಾಣಿಕೆ ಹರಿದು ಬಂದಿದೆ. ಹುಂಡಿಯಲ್ಲಿ 1,14,18,628 ರೂ ಗಳು ಸಂಗ್ರಹವಾಗಿದೆ. ಹುಣ್ಣಿಮೆ ಹಬ್ಬದ ದಿನಗಳಲ್ಲಿ ಚಾಮುಂಡಿ ಬೆಟ್ಟದ ದೇವಾಲಯ ಪ್ರವೇಶಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದ್ದು, ಈ ನಡುವೆಯೂ ಭಕ್ತರಿಂದ ತಾಯಿ ಚಾಮುಂಡೇಶ್ವರಿ ಸನ್ನಿಧಿಗೆ ಕಾಣಿಕೆ ಹರಿದು ಬಂದಿದೆ.
ಇನ್ನು ನೋಟ್ ಬ್ಯಾನ್ ಆಗಿ ನಾಲ್ಕು ವರ್ಷವಾದರೂ ಸಹ ಹಳೆ ನೋಟುಗಳು ಹುಂಡಿಯಲ್ಲಿ ಪತ್ತೆಯಾಗಿದೆ. ಹಳೆ ನೋಟುಗಳನ್ನೇ ಹುಂಡಿಗೆ ಹಾಕಿದ್ದಾರೆ. 500 ರೂ ಮುಖ ಬೆಲೆಯ 138 ನೋಟುಗಳು, ಹಾಗೂ 1000 ರೂ ಮುಖಬೆಲೆಯ 2 ನೋಟುಗಳು ಹುಂಡಿಯಲ್ಲಿ ಪತ್ತೆಯಾಗಿದೆ.
Key words: mysore-chamundi hills-temple- Income –crore