ಮೈಸೂರು,ಜೂ,9,2020(www.justkannada.in): ಲಾಕ್ ಡೌನ್ ಸಡಿಲಿಕೆಯಾಗಿ ಇದೀಗ ದೇವಸ್ಥಾನಗಳನ್ನೂ ತೆರೆಯಲಾಗಿದ್ದು ಮೈಸೂರಿನ ಚಾಮುಂಡಿ ಬೆಟ್ಟದ ದೇಗುಲಕ್ಕೆ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಇಳಿಕೆಯಾಗಿದೆ.
ಚಾಮುಂಡಿ ಬೆಟ್ಟಕ್ಕೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಮ್ಮ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಅವರೊಂದಿಗೆ ಆಗಮಿಸಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಕೆ ಮಾಡಿದ್ದಾರೆ.
ಕೊರೋನಾದಿಂದಾಗಿ ಲಾಕ್ಡೌನ್ ಪರಿಣಾಮ ದೇವಾಲಯಗಳ ಸಾರ್ವಜನಿಕ ದರ್ಶನ ಬಂದ್ ಆಗಿತ್ತು. ನಿನ್ನೆಯಿಂದ ರಾಜ್ಯದಲ್ಲಿ ದೇವಾಲಯ ಮಸೀದಿ, ಚರ್ಚ್ ತೆರೆಯಲಯ ಅವಕಾಶ ನೀಡಲಾಗಿದೆ. ನಾಡದೇವತೆ ಚಾಮುಂಡೇಶ್ವರಿ ಎರಡನೇ ದಿನದ ದರ್ಶನ ಆರಂಭವಾಗಿದ್ದು ಕರೊನಾ ಭೀತಿಯಿಂದ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಇಳಿಕೆಯಾಗಿದೆ.
ಇನ್ನು ಎರಡನೇ ದಿನ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದ್ದು ಬೆಳ್ಳಂ ಬೆಳಗ್ಗೆ ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದಿದ್ದಾರೆ. ದರ್ಶನ ಮುಗಿಸಿ ಗೋಪುರದ ಮುಂದೆ ಭಕ್ತರು ಸೆಲ್ಫಿ ತೆಗೆದುಕೊಳ್ಳುವ ದೃಶ್ಯ ಕಂಡು ಬಂತು. ದೇಗುಲದಲ್ಲಿ ಕೇವಲ ದರ್ಶನ, ಉಳಿದ ಸೇವೆ ಇಲ್ಲ ಎಂದು ಆಡಳಿತ ವರ್ಗ ಧ್ವನಿವರ್ಧಕ ಮೂಲಕ ಭಕ್ತರಿಗೆ ಮಾಹಿತಿ ನೀಡುತ್ತಿದೆ.
Key words: mysore- chamundi hills-yaduveer krishnadatta chamaraj wodeyar- worship