ಮೈಸೂರು,ಜು,16,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು ಈ ನಡುವೆ ನಗರದ ಎನ್.ಆರ್.ಕ್ಷೇತ್ರದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗಿದೆ. ಈ ಹಿನ್ನೆಲೆ ಎನ್.ಆರ್.ಕ್ಷೇತ್ರದ ಹಲವು ಭಾಗ ಲಾಕ್ ಡೌನ್ ಗೆ ಸಿದ್ಧತೆ ನಡೆಸಲಾಗುತ್ತಿದೆ.
ಮೈಸೂರಿನಲ್ಲಿ ಚೇಸಿಂಗ್ ದಿ ವೈರಸ್ ಶೀರ್ಷಿಕೆಯಡಿ ಕಾರ್ಯಾಚರಣೆ ಮೂಲಕ ಕೊರೋನಾ ಮಹಾಮಾರಿ ತಡೆಗಟ್ಟಲು ಜಿಲ್ಲಾಡಳಿತ ಮುಂದಾಗಿದೆ. ಈ ಸಂಬಂಧ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ಈಗಾಗಲೇ ಸ್ಥಳೀಯ ಮುಖಂಡರು, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಪಾಲಿಕೆ ಅಧಿಕಾರಿಗಳು ಹಾಗೂ ಸ್ವಯಂ ಸೇವಕರ ಜೊತೆಗೆ ಚರ್ಚೆ ನಡೆಸಿದ್ದಾರೆ.
ಈ ನಡುವೆ ಎನ್ ಆರ್ ಕ್ಷೇತ್ರದಲ್ಲಿ ಸೋಂಕು ಹೆಚ್ಚಾಗಿದ್ದು ಜಿಲ್ಲೆಯ ಸಾವಿನ ಪ್ರಮಾಣದಲ್ಲೂ ಎನ್.ಆರ್. ಕ್ಷೇತ್ರಕ್ಕೆ ಸಿಂಹಪಾಲು ಇದೆ. ಹೀಗಾಗಿ ಎನ್.ಆರ್.ಕ್ಷೇತ್ರದ ಹಲವು ಭಾಗ ಲಾಕ್ ಡೌನ್ ಮಾಡಲು ಸಿದ್ಧತೆ ನಡೆಸಲಾಗುತ್ತಿದ್ದು, ಉದಯಗಿರಿ, ಕಲ್ಯಾಣಗಿರಿ, ಮಂಡಿ ಮೊಹಲ್ಲಾ, ಸುಭಾಷ್ ನಗರ ಲಾಕ್ ಡೌನ್ ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಹೀಗಾಗಿ ಎನ್ ಆರ್ ಕ್ಷೇತ್ರದಲ್ಲಿ ಲಾಕ್ಡೌನ್ ಬಗ್ಗೆ ಇಂದು ಸಂಜೆಯೊಳಗೆ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ.
ಕೊರೋನಾ ತಡೆಗಟ್ಟಲು ಮುಂಬೈನ ಧಾರಾವಿ ಮಾದರಿಯ ಪ್ರಯೋಗ ಮಾಡಲು ಜಿಲ್ಲಾಧಿಕಾರಿ ಮುಂದಾಗಿದ್ದು, ಮನೆ ಮನೆ ಸರ್ವೇ ನಡೆಸಿ ವೈರಸ್ ನಿಯಂತ್ರಿಸಲು ಪ್ಲ್ಯಾನ್ ರೂಪಿಸಿದ್ದಾರೆ. ಇನ್ನು ರೋಗ ಲಕ್ಷಣವಿದ್ದರೂ ಜನ ಆಸ್ಪತ್ರೆಗೆ ಬರುತ್ತಿಲ್ಲ. ಸ್ಯಾನಿಟೈಸರ್, ಮಾಸ್ಕ್, ಸಾಮಾಜಿಕ ಅಂತರವೂ ಇಲ್ಲದೆ ಜನ ನಿರ್ಲಕ್ಷ್ಯ ವಹಿಸುತ್ತಿದ್ದು, ಸಾರ್ವಜನಿಕರ ನಿರ್ಲಕ್ಷ್ಯಕ್ಕೆ ಲಾಕ್ಡೌನ್ ಶಿಕ್ಷೆ ನೀಡಲು ಚಿಂತನೆ ನಡೆಸಿದ್ದಾರೆ.
Key words: mysore- Chasing – virus – operation –lockdown-DC