ಮೈಸೂರು,ಮೇ,9,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಮೈಸೂರು ಜಿಲ್ಲೆಯಲ್ಲಿ ಮೂರು ಕೋಟಿ ಎರಡು ಲಕ್ಷದ 32 ಸಾವಿರ ರೂ. ಹಣ ಜಪ್ತಿ ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿದ ನಗರ ಪೋಲಿಸ್ ಆಯುಕ್ತ. ಹಾಗೂ ಎಸ್ಪಿ, ಜಿಲ್ಲೆಯಲ್ಲಿ 8 ಕೋಟಿ ರೂ. ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಅಡಿ 40 ದೂರು ದಾಖಲಾಗಿದೆ. ಗೂಂಡಾ ಕಾಯ್ದೆ ಅಡಿ 20 ಮಂದಿ ಗಡಿಪಾರು ಮಾಡಲಾಗಿದ್ದು, 110 ರೌಡಿಗಳ ಮನೆಗಳ ಮೇಲೆ ದಾಳಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮೈಸೂರು ನಗರ ವ್ಯಾಪ್ತಿಯ ಮತಗಟ್ಟೆಗಳಲ್ಲಿ 2,600 ಪೊಲೀಸ್ ಸಿಬ್ಬಂದಿ, ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಚುನಾವಣಾ ಭದ್ರತೆಗೆ 2,514 ಪೊಲೀಸರ ನಿಯೋಜನೆ ಮಾಡಲಾಗಿದೆ. ಕೇವಲ ವರುಣಾ ಕ್ಷೇತ್ರದಲ್ಲೇ 54 ಸೂಕ್ಷ್ಮ ಮತಗಟ್ಟೆಗಳಿವೆ ಎಂದು ಮಾಹಿತಿ ನೀಡಿದರು.
ಚೆಕ್ ಪೋಸ್ಟ್ ಗಳಲ್ಲಿ ತೀವ್ರಗೊಂಡ ತಪಾಸಣೆ.
ನಾಳೆ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆ, ಚುನಾವಣಾ ಅಕ್ರಮ ತಡೆಯಲು ಮೈಸೂರಿನ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ತೀವ್ರಗೊಂಡಿದೆ. ನಗರದ ಅಷ್ಟದಿಕ್ಕುಗಳಲ್ಲಿ ಪೋಲಿಸರ ಹದ್ದಿನ ಕಣ್ಣಿಡಲಾಗಿದೆ. ಮೈಸೂರಿಗೆ ಆಗಮಿಸುವ ವಾಹನಗಳ ಮೇಲೆ ನಿಗಾ ಇಡಲಾಗಿದ್ದು, ಪ್ರತಿ ಚೆಕ್ ಪೋಸ್ಟ್ ಗಳಲ್ಲೂ ತಪಾಸಣೆ ಮುಂದುವರೆದಿದೆ.
ಕಡಕೊಳ, ಬೆಳವಾಡಿ, ಚಿಕ್ಕಹಳ್ಳಿ ನಾಗನಹಳ್ಳಿ ಸೇರಿದಂತೆ ಹಲವೆಡೆ ಚುನಾವಣಾ ಚೆಕ್ ಪೋಸ್ಟ್ ಗಳಲ್ಲಿ ತಪಾಸಣಾ ಕಾರ್ಯ ತೀವ್ರಗೊಂಡಿದೆ. ಪ್ರತಿಯೊಂದು ವಾಹನಗಳನ್ನ ತಪಾಸಣೆ ಮಾಡಲಾಗುತ್ತಿದ್ದು, ತಪಾಸಣೆ ಬಳಿಕವೇ ನಗರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಅಧಿಕ ಹಣ ಸಾಗಾಟಕ್ಕೆ ಈಗಾಗಲೇ ಚುನಾವಣಾ ಆಯೋಗ ನಿಷೇಧ ಹೇರಿದೆ.
Key words: Mysore -check posts-Rs 3.2 crore – money-sieze