ಮೈಸೂರು, ಮೇ 19, 2020 : (www.justkannada.in news ) ಲಾಕ್ ಡೌನ್ ಕೊಂಚಮಟ್ಟಿಗೆ ರಿಲ್ಯಾಕ್ಸ್ ಆದರೂ ಸಹ ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದೆ ಮೈಸೂರು ನಗರ ಬಸ್ ನಿಲ್ದಾಣ.
ಸಾರ್ವಜನಿಕರ ಸಂಚಾರಕ್ಕೆ ಅವಕಾಶವಿದ್ದರೂ ಮುಖ ಮಾಡದ ಪ್ರಯಾಣಿಕರು. ಸಂಚಾರಕ್ಕೆ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಂಡಿರುವ ಸಿಬ್ಬಂದಿ. ನಿಲ್ದಾಣದಲ್ಲಿರುವ ಕೈಬೆರಳೆಣಿಕೆಯಷ್ಟು ಪ್ರಯಾಣಿಕರನ್ನು ಅಗತ್ಯ ತಪಾಸಣೆಗೆ ಒಳಪಡಿಸುತ್ತಿರುವ ಸಾರಿಗೆ ಸಿಬ್ಬಂದಿ.
ಎರಡು ಆಸನಗಳಲ್ಲಿ ಒಬ್ಬರು, ಮೂರು ಆಸನಗಳಲ್ಲಿ ಇಬ್ಬರಿಗೆ ಪ್ರಯಾಣಿಸಲು ಅವಕಾಶ. ಸಂಚರಿಸುವ ಎಲ್ಲಾ ಬಸ್ ಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ. ಸದ್ಯಕ್ಕೆ 50 ಕ್ಕೂ ಹೆಚ್ಚು ಬಸ್ ಗಳ ಕಾರ್ಯಾಚರಣೆ. ಪ್ರಯಾಣಿಕರ ಸಂಖ್ಯೆಗನುಗುಣವಾಗಿ ಬಸ್ ಕಾರ್ಯಾಚರಣೆ.
ಆದರೆ, ಮೈಸೂರು ಕೇಂದ್ರಿಯ ಬಸ್ ನಿಲ್ದಾಣ (ಗ್ರಾಮಾಂತರ ಬಸ್ ನಿಲ್ದಾಣ) ದಲ್ಲಿ ಮಾತ್ರ ಇದಕ್ಕೆ ವ್ಯತಿರಿಕ್ತವಾದ ಚಿತ್ರಣ ಕಂಡು ಬಂದಿದೆ. ಇಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಬಸ್ ಪ್ರಯಾಣಕ್ಕೆ ಮುಂದಾಗಿರುವುದು ಕಂಡು ಬಂದಿದೆ.
ಸಾರ್ವಜನಿಕರ ಓಡಾಟ..
ಲಾಕ್ ಡೌನ್ ಸಡಿಲಿಕೆ ಹಿನ್ನೆಲೆ. ಮೈಸೂರಿನಲ್ಲಿ ಎಂದಿನಂತೆ ಸಾರ್ವಜನಿಕರ ಓಡಾಟ. ವ್ಯಾಪಾರ ವಹಿವಾಟು ಆರಂಭ. ಜಿಮ್, ಸಿನಿಮಾ ಮಂದಿರ, ಮಾಲ್ ಹೊರತಿಪಡಿಸಿ ಮಿಕ್ಕೆಲ್ಲ ವಾಣಿಜ್ಯ ಚಟುವಟಿಕೆ ಆರಂಭ.
ನಗರದ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಜನಸಂದಣಿ. ನಿಧಾನವಾಗ ಸಹಜ ಸ್ಥಿರಿಗೆ ಮರಳುತ್ತಿರೊ ಸಾಂಸ್ಕೃತಿಕ ನಗರಿ. ಸಾಮಾಜಿಕ ಅಂತರ ಕಾಯ್ದು ಕೊಳುತ್ತಾರ ಮೈಸೂರಿನ ಜನಾ. ಮುಂಜಾಗ್ರತ ಕ್ರಮವಹಿಸಿ ಕೊರೊನೊದಿಂದ ದೂರವಾಗ್ತಾರ ? ಇಲ್ಲ ಕೊರೊನೊ ಸೋಂಕಿಗ ಆಹ್ವಾನ ನೀಡ್ತಾರ ಎಂಬುದೇ ಯಕ್ಷ ಪ್ರಶ್ನೆ.
key words : mysore-city-bus.stand-no-passengers-lock.down.relaxed
————