ಇನ್ಮೆಲೆ ಆಧಾರ (ಕಾರ್ಡ್)ವಿಲ್ಲದೆ ಶವಕ್ಕೂ ಮುಕ್ತಿ ಇಲ್ಲ…!

 

ಮೈಸೂರು, ಮಾ.03, 2020 : ( www.justkannada.in news ) ಕೇಂದ್ರ ಸರಕಾರ ಜಾರಿಗೆ ತಂದಿರುವ ‘ ಅಧಾರ್ ಕಾರ್ಡ್ ‘ ಕೇವಲ ಸರಕಾರಿ ಸವಲತ್ತುಗಳನ್ನು ಪಡೆಯಲು ಮಾತ್ರ ಕಡ್ಡಾಯವಲ್ಲ. ಇನ್ಮುಂದೆ ಅದು ಮರಣದ ನಂತರದ ಕ್ರೀಯೆಗೂ ಕಡ್ಡಾಯ.

ಮೈಸೂರು ನಗರಪಾಲಿಕೆ ವ್ಯಾಪ್ತಿಯ ಯಾವುದೇ ಚಿತಾಗಾರ ಅಥವಾ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲು ಮೃತ ವ್ಯಕ್ತಿಯ ಆಧಾರ್ ಸಂಖ್ಯೆ, ಮಾಹಿತಿ ನೀಡುವುದು ಈಗ ಕಡ್ಡಾಯ. ಕೌಟಂಬಿಕ ವ್ಯಾಜ್ಯ, ಕಾನೂನು ತೊಡಕಿನಂತ ಸಮಸ್ಯೆಗಳಿಗೆ ಪರಿಹಾರಾರ್ಥವಾಗಿ ಮೈಸೂರು ನಗರ ಪಾಲಿಕೆ ಈ ವ್ಯವಸ್ಥೆ ಜಾರಿಗೆ ತಂದಿದೆ.

mysore-city-corporation-adhar-card-compulsary-for-cremation-in-mysore-no.adhar-no.crematuion-in.mysore

ಮೃತ ವ್ಯಕ್ತಿಗೆ ಆಧಾರ್ ಕಡ್ಡಾಯ, ಒಂದು ವೇಳೆ ಆಧಾರ್ ಇಲ್ಲದಿದ್ದರೆ, ಆತ ವಾಸಿಸುತ್ತಿದ್ದ ವಿಳಾಸದ ದೃಢೀಕರಣ, ಭಾವಚಿತ್ರವಿರುವ ಗುರುತಿನ ಚೀಟಿ ಸಲ್ಲಿಸಬೇಕು. ಒಂದು ವೇಳೆ ಮೃತ ವ್ಯಕ್ತಿಯ ಹೆಸರಲ್ಲಿ ಈ ದೃಢೀಕರಣ ದಾಖಲೆಗಳಿಲ್ಲದಿದ್ದಲ್ಲಿ ಚಿತಾಗಾರ ಅಥವಾ ರುದ್ರಭೂಮಿಗೆ ನೇಮಿಸಿರುವ ಪಾಲಿಕೆ ಸಿಬ್ಬಂದಿ, ಮೃತ ವ್ಯಕ್ತಿಯ ವಾಸಸ್ಥಳಕ್ಕೆ ಖುದ್ದು ಭೇಟಿ ನೀಡಿ, ಮಹಜರು ನಡೆಸಿ ಅಕ್ಕ-ಪಕ್ಕದ ಮನೆಯವರ ಹೇಳಿಕೆ ದಾಖಲಿಸಿಕೊಂಡ ನಂತರವೇ ಅಂತ್ಯಕ್ರಿಯೆ ನಡೆಸಬೇಕು ಎಂದು ಮೈಸೂರು ಮಹಾನಗರ ಪಾಲಿಕೆಯ ಸಂಬಂಧಪಟ್ಟ ಅಧಿಕಾರಿ ತಿಳಿಸಿದ್ದಾರೆ.

mysore-city-corporation-adhar-card-compulsary-for-cremation-in-mysore-no.adhar-no.crematuion-in.mysore

ಅನಾಥ ಶವ ಅಥವಾ ಪೊಲೀಸರು ಮನವಿ ಸಲ್ಲಿಸುವ ಪ್ರಕರಣಗಳಲ್ಲಿ, ಎಫ್ಐಆರ್ ಮತ್ತು ಮಹಜರು ವರದಿ ಆಧರಿಸಿ ಆಧಾರ್ ಕಾರ್ಡ್ ಅಥವಾ ಇನ್ನಿತರ ದಾಖಲೆಗಳಿಲ್ಲದಿದ್ದರೂ ಮೃತದೇಹ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಕೆಲ ವಿಶೇಷ ಸಂದರ್ಭಗಳಲ್ಲಿ ಪೊಲೀಸರ ಗಮನಕ್ಕೆ ತಾರದೆ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಇದು ಕಾನೂನಿನ ತೊಡಕುಗಳಿಗೆ ಆಸ್ಪದ ನೀಡುತ್ತದೆ. ಈ ಬಗ್ಗೆ ಸಾಕಷ್ಟು ದೂರು ಬರುತ್ತಿರುವ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಗೆ ಆಧಾರ್ ಕಡ್ಡಾಯ ಮಾಡಲಾಗಿದೆ ಎಂದು ಮೈಸೂರು ನಗರ ಪಾಲಿಕೆ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.

key words : mysore-city-corporation-adhar-card-compulsary-for-cremation-in-mysore-no.adhar-no.crematuion-in.mysore