ಮೈಸೂರು,ಮಾರ್ಚ್,26,2021(www.justkannada.in): ಮೈಸೂರು ಮಹಾನಗರ ಪಾಲಿಕೆ ಈ ಅವಧಿಯ ಮೊದಲ ಕೌನ್ಸಿಲ್ ಸಭೆ ಇಂದು ನಡೆಯಿತು. ಸಭೆಯಲ್ಲಿ ಮೂರು ಸಮಿತಿಗೆ ಅಧ್ಯಕ್ಷರು, ಸದಸ್ಯರನ್ನ ಆಯ್ಕೆ ಮಾಡಲಾಯಿತು.
ಕೌನ್ಸಿಲ್ ಸಭೆಯಲ್ಲಿ ಮೇಯರ್ ರುಕ್ಮಿಣಿ ಮಾದೇಗೌಡ, ಉಪಮೇಯರ್ ಅನ್ವರ್ ಬೇಗ್, ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಭಾಗಿಯಾಗಿದ್ದರು. ಸಭೆಯಲ್ಲಿ ಟೌನ್ ಹಾಲ್ ಕಮಿಟಿ, ಅಂಬಾಳೆ ಅಣ್ಣಯ್ಯ ಟ್ರಸ್ಟ್, ಸೂಯಜ್ ಫಾರಂ ಮೂರು ಸಮಿತಿಗೆ ಸದಸ್ಯರ ಚುನಾವಣೆ ನಡೆಯಿತು.
ಟೌನ್ ಹಾಲ್ ಕಮಿಟಿಗೆ ಸದಸ್ಯರಾಗಿ ಸಾತ್ವಿಕ್, ಪುಷ್ಪಲತಾ ಜಗನ್ನಾಥ್, ಪ್ರಮೀಳಾ ಭರತ್, ಮಹಮದ್ ರಫೀಕ್, ಲೋಕೇಶ್, ಶಾಂತಕುಮಾರಿ, ರಮೇಶ್ ಆಯ್ಕೆಯಾದರು.
ಅಂಬಾಳೆ ಪಂಡಿತ್ ಉಚಿತ ವಿದ್ಯಾರ್ಥಿ ನಿಲಯ ಸಮಿತಿಯ ಅಧ್ಯಕ್ಷರಾಗಿ ಮೇಯರ್ ರುಕ್ಮಿಣಿ ಮಾದೇಗೌಡ, ಸದಸ್ಯರಾಗಿ ಭಾಗ್ಯ ,ಗೋಪಿ, ಗೀತಾ, ಶೋಭಾ, ಲಕ್ಷ್ಮೀ ಅವರು ಅಯ್ಕೆಯಾದರು. ಇನ್ನು ಸೂಯಜ್ ಫಾರಂ ಸಮಿತಿಗೆ ಅಧ್ಯಕ್ಷರಾಗಿ ಉಪ ಮೇಯರ್ ಅನ್ವರ್ ಬೇಗ್, ಸದಸ್ಯರಾಗಿ ಸಮೀ ಉಲ್ಲಾ ಅಜ್ಜು, ಸಾವುದ್ ಖಾನ್, ಸುಬ್ಬಯ್ಯ, ವೇದಾವತಿ, ಮಹಮ್ಮದ್ ರಫೀಕ್, ಹಜರತ್ ಉಲ್ಲಾ ಆಯ್ಕೆಯಾದರು.
ಸಭೆ ಆರಂಭಕ್ಕೂ ಮೊದಲು ಮಾತಿನ ಚಕಮಕಿ…
ಸಭೆ ಆರಂಭಕ್ಕೂ ಮೊದಲು ಮೇಯರ್ ಸ್ಥಾನಕ್ಕೆ ಅಗೌರವ ತೋರಿದ್ದೀರೆಂದು ಬಿಜೆಪಿ ಹಿರಿಯ ಸದಸ್ಯೆ ಸುನಂದಾ ಪಾಲನೇತ್ರ ಆರೋಪ ಮಾಡಿದರು. ಮೇಯರ್ ಆದ ಬಳಿಕ ರುಕ್ಮಿಣಿ ಮಾದೇಗೌಡರನ್ನು ಅವರ ಪತಿ ಎತ್ತಿಕೊಂಡು, ಮುತ್ತಿಟ್ಟು ಸಂಭ್ರಮಿಸಿದ್ದರು.
ಈ ಹಿನ್ನೆಲೆಯಲ್ಲಿ ಮೇಯರ್ ಆಗಿ ಆಯ್ಕೆಯಾದ ಬಳಿಕ ಮೇಯರ್ ಸ್ಥಾನಕ್ಕೆ ಅಗೌರವ ತೋರಿದ್ದಾರೆ ಎಂದು ಬಿಜೆಪಿ ಹಿರಿಯ ಸದಸ್ಯೆ ಸುನಂದಾ ಪಾಲನೇತ್ರ ಆರೋಪಿಸಿದರು. ಮೇಯರ್ ಸ್ಥಾನಕ್ಕೆ, ಮೇಯರ್ ಗೌನ್ ಗೆ ಅಪಮಾನ ಮಾಡಿದ್ದೀರಿ ಆದ್ದರಿಂದ ತಾವು ಸಭೆಗೆ ಕ್ಷಮಾಪಣೆ ಕೇಳಬೇಕೆಂದು ಸುನಂದಾ ಪಾಲನೇತ್ರ ಆಗ್ರಹಿಸಿದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೆಲಕಾಲ ಸಭೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಬಿಜೆಪಿ ವಿರೋಧ ಪಕ್ಷದ ನಾಯಕರ ಬದಲಾವಣೆ
ಸಭೆಯಲ್ಲಿ ಬಿಜೆಪಿ ವಿರೋಧ ಪಕ್ಷದ ನಾಯಕರ ಬದಲಾವಣೆ ಮಾಡಲಾಯಿತು. ವಿರೋಧ ಪಕ್ಷದ ನಾಯಕರಾಗಿ ಶಿವಕುಮಾರ್ ಆಯ್ಕೆಯಾದರು. ಮೂರು ಬಾರಿ ಶಿವಕುಮಾರ್ ಪಾಲಿಕೆ ಸದಸ್ಯರಾಗಿದ್ದಾರೆ. ಈ ಹಿಂದೆ ಸುಬ್ಬಯ್ಯ ವಿರೋಧ ಪಕ್ಷದ ನಾಯಕರಾಗಿದ್ದರು.
ಜೆ ಡಿ ಎಸ್ ಅಡಳಿತ ಪಕ್ಷದ ನಾಯಕರನ್ನು ಬದಲಾವಣೆ ಮಾಡಲಾಯಿತು. ಜೆಡಿಎಸ್ ಆಡಳಿತ ಪಕ್ಷದ ನಾಯಕರಾಗಿ ಅಶ್ವಿನಿ ಅನಂತು ನೇಮಕವಾದರು.
Key words: Mysore city corporation-Council -Meeting.