ಮೈಸೂರು,ಫೆಬ್ರವರಿ,28,2024(www.justkannada.in): ನೀರಿನ ಶುಲ್ಕ ಭಾರದಿಂದ ಬಸವಳಿದ ಪ್ರತಿಷ್ಠಿತ ಮೈಸೂರು ಮಹಾನಗರ ಪಾಲಿಕೆಗೆ ಆರ್ಥಿಕ ಸಂಕಷ್ಟ ಎದುರಾಗಿದೆ.
ಮೈಸೂರು ಮಹಾನಗರ ಪಾಲಿಕೆಗೆ 244 ಕೋಟಿ ರೂ. ನೀರಿನ ಶುಲ್ಕ ಬಾಕಿ ಬರಬೇಕಿದ್ದು, ಪರಿಣಾಮ ಪಾಲಿಕೆಯು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ವಾಣಿವಿಲಾಸ ನೀರು ಸರಬರಾಜು ಕೇಂದ್ರದಿಂದ ನೀರು ಪಡೆಯುತ್ತಿರುವ ಗ್ರಾಹಕರು 178 ಕೋಟಿ ರೂ. ನೀರಿನ ಬಿಲ್ ಬಾಕಿ ಪಾವತಿಸಬೇಕಿದೆ. ಆದರೆ ಗ್ರಾಹಕರು ನೀರಿನ ಬಿಲ್ ಅನ್ನು ಸಮರ್ಪಕವಾಗಿ ಪಾವತಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ನೀರಿನ ಬಿಲ್ ಪಾವತಿಯಾಗದಿದ್ದರೂ ಸಹ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ದೂರುತಿದ್ದಾರೆ ಗೃಹ ಬಳಕೆದಾರರು. ಗ್ರಾಹಕರು ನೀರಿನ ಬಿಲ್ ಪಾವತಿಸದೇ ಇರುವುದರಿಂದ ಗೃಹ ಬಳಕೆದಾರರ ನೀರಿನ ಬಿಲ್ ಪಾಲಿಕೆಗೆ ಹೊರೆಯಾಗುತ್ತಿದೆ.
ನೀರಿನ ಬಾಕಿ ಬಿಲ್ ನ ಬಡ್ಡಿಮನ್ನಾವಾಗಿದ್ದರೂ ಸಹ ಗ್ರಾಹಕರು ಬಾಕಿ ಬಿಲ್ ಪಾವತಿಗೆ ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನೀರಿನ ಬಾಕಿ ಬಿಲ್ ವಸೂಲಿ ಮಾಡಲಾಗದೇ ಪಾಲಿಕೆ ಸಿಬ್ಬಂದಿಗಳು ಕಂಗಲಾಗಿದ್ದು, ಇದರ ಪರಿಣಾಮ ಮೈಸೂರು ಮಹಾನಗರ ಪಾಲಿಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎನ್ನಲಾಗಿದೆ.
Key words: Mysore city Corporation – financial –trouble-water bill-pending