ಮೈಸೂರು,ನ,28,2019(www.justkannada.in): ರಸ್ತೆ ಬದಿಯಲ್ಲಿ ರೆಂಬೆಕೊಂಬೆಗಳನ್ನ ಕತ್ತರಿಸುವ ಸಲುವಾಗಿ ಲಕ್ಷಾಂತರ ರೂ ನೀಡಿ ತರಲಾಗಿದ್ದ ಶಕ್ತಿಮಾನ್ ಯಂತ್ರ ಮೈಸೂರು ಮಹಾನಗರ ನಿರ್ಲಕ್ಷ್ಯದಿಂದ ಇದೀಗ ಅನಾಥವಾಗಿ ನಿಂತಿದೆ.
ಹೌದು, ಪಾಲಿಕೆ ಅನುದಾನದಲ್ಲಿ 21 ಲಕ್ಷ ವ್ಯಯ ಮಾಡಿ ಮರ ಕತ್ತರಿಸುವ ಅತ್ಯಾಧುನಿಕ ಶಕ್ತಿಮಾನ್ ಯಂತ್ರವನ್ನ ತರಲಾಗಿತ್ತು. ಶಾಸಕ ಜಿ.ಟಿ.ದೇವೆಗೌಡರು ಯಂತ್ರವನ್ನ ಉದ್ಘಾಟಿಸಿದ್ದರು. ಆದರೆ ಈ ಯಂತ್ರ ಸೂಕ್ತ ನಿರ್ವಹಣೆ ಇಲ್ಲದೆ ನಗರದ ರಾಜ್ ಕುಮಾರ್ ಪಾರ್ಕ್ ನಲ್ಲಿ ಶಕ್ತಿ ಕಳೆದುಕೊಂಡು ನಿಂತಿದೆ.
ಕಳೆದ ಎರಡು ತಿಂಗಳುಗಳಿಂದಲೂ ಶಕ್ತಿಮಾನ್ ಯಂತ್ರ ಬಳಕೆಯಾಗದೆ ರಾಜ ಕುಮಾರ್ ಪಾರ್ಕ್ ನಲ್ಲಿ ನಿಂತಿದೆ. ಯಂತ್ರವನ್ನ ತಂದು ಎರಡು ತಿಂಗಳು ಕಳೆದರೂ ಪಾಲಿಕೆ ಅಧಿಕಾರಿಗಳು ಮಾತ್ರ ಇತ್ತ ಕಡೆ ಗಮನಹರಿಸಿಲ್ಲ. ಇದು ಪಾಲಿಕೆ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಪಾಲಿಕೆ ನಿರ್ಲಕ್ಷ್ಯದಿಂದಾಗಿ ಲಕ್ಷಾಂತರ ಬೆಲೆ ಬಾಳುವ ಈ ಯಂತ್ರ ಈಗಾಗಲೇ ತುಕ್ಕು ಹಿಡಿಯುವ ಹಂತದಲ್ಲಿದ್ದು, ಈ ಬಗ್ಗೆ ಪಾಲಿಕೆ ಅಧಿಕಾರಿಗಳ ಬಳಿ ಕೇಳಿದರೆ ಸರ್ವಿಸ್ ನ ನೆಪ ಹೇಳುತ್ತಿರುವುದು ವಿಪರ್ಯಾಸ. ಒಟ್ಟಿನಲ್ಲಿ ಇನ್ನಾದರೂ ಪಾಲಿಕೆ ಅಧಿಕಾರಿಗಳು ಇದರ ಕಡೆ ಗಮನ ಹರಿಸಿ ಶಕ್ತಿಮಾನ್ ಯಂತ್ರವನ್ನ ಬಳಕೆ ಮಾಡಲು ಮುಂದಾಗಬೇಕಿದೆ.
Key words: Mysore city corporation-neglect-Shaktiman machine -loses -energy.