ಮೈಸೂರು,ಆ,19,2019(www.justkannada.in): ಸರಸ್ವತಿಪುರಂನ ಅಗ್ನಿಶಾಮಕ ಮುಖ್ಯ ಕಚೇರಿಯ ಕಟ್ಟಡ ಮಳೆಯಿಂದ ಕುಸಿತ ಹಿನ್ನಲೆ ಇದೀಗ ಎಚ್ಚೆತ್ತ ಮೈಸೂರು ಮಹಾ ನಗರಪಾಲಿಕೆ ಅಧಿಕಾರಿಗಳು ದೇವರಾಜ ಮಾರುಕಟ್ಟೆಯ ವ್ಯಾಪಾರಿಗಳಿಗೆ ನೋಟಿಸ್ ನೀಡಿದ್ದಾರೆ.
ಮೈಸೂರು ಮಹಾನಗರ ಪಾಲಿಕೆಯ ಮಾರುಕಟ್ಟೆಗಳ ವಾಣಿಜ್ಯ ಮಳಿಗೆಗಳು, ಶೀತಲಾವಸ್ಥೆ ತಲುಪಿದೆ. ಜೊತೆಗೆ ಅಧಿಕ ಮಳೆಯಾಗುತ್ತಿರುವುದರಿಂದ ಮಳೆಗೆಗಳನ್ನು ಖಾಲಿ ಮಾಡುವಂತೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದು, ವ್ಯಾಪಾರಿಗಳ ನಿದ್ದೆಗೆಡಿಸಿದೆ.
ಗೌರಿ ಗಣೇಶ, ಆಯುಧ ಪೂಜೆ, ದಸರಾ ಮಹೋತ್ಸವ ಸೇರಿದಂತೆ ಸಾಲು ಸಾಲು ಹಬ್ಬಗಳು ಹತ್ತಿರದಲ್ಲಿವೆ, ಹೀಗಾಗಿ ಪಾಲಿಕೆ ಅಧಿಕಾರಿಗಳ ನೋಟಿಸ್ ನಿಂದ ವ್ಯಾಪಾರಿಗಳಿಗೆ ಬೇಸರ ಉಂಟಾಗಿದೆ. ವ್ಯಾಪಾರಿಗಳ ಹಾಗೂ ಗ್ರಾಹಕರ ಸುರಕ್ಷತೆಗಾಗಿ ದೇವರಾಜ ಮಾರುಕಟ್ಟೆಯ ಮೇಲೆ ನಗರಪಾಲಿಕೆ ಅಧಿಕಾರಿಗಳ ಕಣ್ಣಿಟ್ಟಿದ್ದು, ಇದರಿಂದ ಮಳಿಗೆ ವ್ಯಾಪಾರಿಗಳಿಗಲ್ಲದೆ ಬೀದಿಬದಿ ವ್ಯಾಪಾರಿಗಳಿಗೂ ಭಾರಿ ಹೊಡೆತ ಬೀಳಲಿದೆ.
Key words: Mysore City corporation- Notice – Devaraja Market -Merchants