ಮೈಸೂರು,ಜನವರಿ,4,2021(www.justkannada.in): ಮೈಸೂರು ಮಹಾನಗರ ಪಾಲಿಕೆಯು ಕಟ್ಟಡಗಳ ಡೆಬ್ರೀಸ್ ಸಂಗ್ರಹಣೆ ಮತ್ತು ಕಸ ವಿಲೇವಾರಿ ಹೊಣೆ ಸುಸ್ಥಿರ ಟ್ರಸ್ಟ್ ಗೆ ನೀಡಿರುವುದಕ್ಕೆ ಕಾಂಗ್ರೆಸ್ ಅಪಸ್ವರ ಎತ್ತಿದೆ.
ಈ ಕುರಿತು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ , ಮೈಸೂರು ಮಹಾನಗರ ಪಾಲಿಕೆ ನಿಯಮವನ್ನ ಫಾಲೋ ಮಾಡಿಲ್ಲ. ಸರ್ಕಾರದ ಮಾನದಂಡಗಳ ಪಾಲನೆ ಆಗಿಲ್ಲ. ಸಂಸದ ಪ್ರತಾಪ ಸಿಂಹ ಅವರ ರೆಕಮೆಂಡ್ ಮೇಲೆ ಕಟ್ಟಡಗಳ ಡೆಬ್ರೀಸ್ ಸಂಗ್ರಹಣೆ ಮತ್ತು ಕಸ ವಿಲೇವಾರಿ ಹೊಣೆಯನ್ನ ಸುಸ್ಥಿರ ಟ್ರಸ್ಟ್ ಗೆ ನೀಡಲಾಗಿದೆ. ಈ ವಿಚಾರದಲ್ಲಿ ಕೌನ್ಸಿಲ್ ಸಭೆಯಲ್ಲಿ ಕಾರ್ಪೊರೇಷನ್ ನಲ್ಲಿ ಹೈ ಡ್ರಾಮಾ ನಡೆದಿದೆ ಎಂದು ಆರೋಪಿಸಿದರು.
ಸುಸ್ಥಿರ ಟ್ರಸ್ಟ್ ಗೆ ಈ ಹೊಣೆ ನೀಡಿರುವುದಕ್ಕೆ ಆಕ್ಷೇಪಿಸಿದ ಎಂ.ಲಕ್ಷ್ಮಣ್, ಸುಸ್ಥಿರ ಟ್ರಸ್ಟ್ ಈ ರೀತಿ ಪ್ರಾಜೆಕ್ಟ್ ಎಲ್ಲಿ ಮಾಡಿದ್ದಾರೆ ತಿಳಿಸಿ. ಹತ್ತು ಎಕರೆ ಭೂಮಿಯನ್ನು ಫ್ರಿಯಾಗಿ ಕೊಡ್ತಾರೆ. ಸುಸ್ಥಿರ ಟ್ರಸ್ಟ್ ಗೆ ನೀಡಲು ಪ್ರತಾಪ್ ಸಿಂಹ ದೊಡ್ಡ ಮಟ್ಟದ ಆಂದೋಲನ ಮಾಡುತ್ತಿದ್ದಾರೆ. ಸುಸ್ಥಿರ ಟ್ರಸ್ಟ್ ಈ ಯೋಜನೆ ಮಾಡಲು ಎಲಿಜಬಲ್ ಇದೆಯಾ ಎಂಬುದನ್ನ ಹೇಳಿ ಎಂದು ಪ್ರಶ್ನಿಸಿದರು.
ಡಿಸೆಂಬರ್ 15 ರಂದು ನಡೆದ ಪ್ರಕ್ರಿಯೆಯಲ್ಲಿ ಸುಸ್ಥಿರ ಟ್ರಸ್ಟ್ ಭಾಗವಹಿಸಿರಲಿಲ್ಲ. ಉಳಿದ ನಾಲ್ಕು ಕಂಪನಿಗಳು ಭಾಗವಹಿಸಿದ್ದವು. ಅವುಗಳಿಗೆ ಸೇವಾನುಭವ ಇಲ್ಲ ಎಂದು ತಿರಸ್ಕಾರ ಮಾಡಿದ್ದೀರಿ. ನವೆಂಬರ್ 30 ರಂದೇ ಸುಸ್ಥಿರ ಟ್ರಸ್ಟ್ ನಿಂದ ಅರ್ಜಿ ಪಡೆದು ಸುಸ್ಥಿರ ಟ್ರಸ್ಟ್ ಗೆ ನೀಡಲು ಚರ್ಚೆ ಮಾಡುತ್ತೀರಿ. 20 ವರ್ಷಗಳ ಅವಧಿಗೆ ಯೋಜನೆಗೆ ಅನುಮತಿ ನೀಡುತ್ತೀರಿ ಈ ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೇ ಅನುಭವವೇ ಇಲ್ಲದ ಕಂಪನಿಗೆ ನೀಡಿರುವುದು ಏಕೆ..? ನಿಯಮ ಪಾಲನೆ ಮಾಡದೆ ಸರ್ಕಾರಿ ಜಮೀನನ್ನು ನೀಡಿರುವುದು ಎಷ್ಟು ಸರಿ ಎಂದು ಎಂ.ಲಕ್ಷ್ಮಣ್ ಕಿಡಿಕಾರಿದರು.
Key words: Mysore –city-corporation-responsible –garbage- disposal-susthira trust-Congress- M Lakshman