ಮೈಸೂರು,ಏಪ್ರಿಲ್,15,2021(www.justkannada.in): ಕೊರೋನಾದಿಂದಾಗಿ ಮೈಸೂರು ಮಹಾನಗರ ಪಾಲಿಕೆಯ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ. ವಲಯ ಆಯುಕ್ತರ ಕಾರ್ ಡ್ರೈವರ್ ಹಾಗೂ ಮೇಯರ್ ದಫೇದಾರ್ ಅನಂತು ನಿಧನರಾಗಿದ್ದಾರೆ. ಹೀಗಾಗಿ ಪ್ರೈಮರಿ ಕಾಂಟ್ಯಾಕ್ಟ್ ಇರುವವರು ಎಚ್ಚರವಹಿಸಿ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್ ಮನವಿ ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ವಲಯ ಆಯುಕ್ತರಿಗೆ ಪಾಸಿಟಿವ್ ಆಗಿತ್ತು. ಬಳಿಕ ಅವರ ಕಾರ್ ಡ್ರೈವರ್ ಗೂ ಕೂಡಾ ಪಾಸಿಟಿವ್ ಆಗಿ ಗಂಭೀರವಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಮಹಾಪೌರರ ದಫೇದಾರ್ ಅನಂತುಗೂ ಕೂಡಾ ಪಾಸಿಟಿವ್ ಆಗಿತ್ತು. ಅವರೂ ಕೂಡಾ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹೀಗಾಗಿ ಪ್ರೈಮರಿ ಕಾಂಟಾಕ್ಟ್ ಇರುವವರು ಎಚ್ಚರವಹಿಸಿ, ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ. ಹೋಮ್ ಐಸುಲೇಷನ್ ನಲ್ಲಿರುವರು ವೈದ್ಯರ ಸಲಹೆ ಪಡೆಯಬೇಕು ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಶೇ.90ರಷ್ಟು ಜನ ಹೋಮ್ ಐಸುಲೇಷನ್ ಆಗಿದ್ದಾರೆ. ಹೋಮ್ ಐಸೋಲೇಷನ್ ಇವವರಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ಮನೆಯಲ್ಲಿ ಸೌಕರ್ಯ ಇಲ್ಲದವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್ ಮನವಿ ಮಾಡಿದ್ದಾರೆ.
Key words: mysore city corporation-two-death- covid- health officer-Dr. Nagaraj